SHARE

ಬೆಳಗಾವಿ: ಕುಖ್ಯಾತ ಭೂಗತ ಪಾತಕಿ ಬನ್ನಂಜೆ ರಾಜಾ ಹಾಗೂ ಆತನ ಸಹಚರರ ವಿಚಾರಣೆ ನಗರದ ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರ ಎದುರು ನಡೆಯಿತು.ಉದ್ಯಮಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿ ವಿಶೇಷ ಕೋಕಾ ನ್ಯಾಯಾಲಯ ವಿಚಾರಣೆ ಸೋಮವಾರ ನಡೆಸಿತು.ಜಿಲ್ಲಾ ನ್ಯಾಯಾಧೀಶ ಆರ್. ಜೆ. ಸತೀಶಸಿಂಗ್ ವಿಚಾರಣೆ ತೆರೆದ ಕೋರ್ಟನಲ್ಲಿ ನಡೆಸಿದರು. ಪ್ರಕರಣದ ವಿಚಾರಣೆಯನ್ನು ವಿಶೇಷ ಕೋಕಾ ನ್ಯಾಯಾಲಯ ಜೂನ್. 9 ಕ್ಕೆ ಮುಂದೂಡಿತು. ಭಾರಿ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಮತ್ತೆ ಹಿಂಡಲಗಾ ಜೈಲಿಗೆ ಕರೆದೊಯ್ಯಲಾಯಿತು.