SHARE

ಬೆಳಗಾವಿ:ಜಿಲ್ಲೆಯ ಮಾಜಿ ಹಾಲಿ ಜಾರಕಿಹೊಳಿ ಸಹೋದರರ ಮುಸುಕಿನ ಗುದ್ದಾಟ ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಇಂದು ಕಿಡಿಯಾಗಿ ಬೆಂಕಿ ಹೊತ್ತಿದೆ.ಜವಾಬ್ದಾರಿಯುತ ಜಿಲ್ಲಾ ಉಸ್ತುವಾರಿ ಸಚಿವರಾಗಿ ರಮೇಶ ಜಾರಕಿಹೊಳಿ ಸತತ ಅಸಂಬಧ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಪತ್ರಿಕೆಗಳ ಕಟಿಂಗ್ಸ್ ಹೊತ್ತು ಸತೀಶ ಜಾರಕಿಹೊಳಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಸವರ ಮುಂದಿಟ್ಟಿದ್ದಾರೆ.

ಈ ಮಧ್ಯೆ ತಾನೇನು ಹೇಳಿಕೆಗಳನ್ನು ಕೊಟ್ಟಿಲ್ಲ ಎಂದು ಹಿರಿಯ ಸಹೋದರ ರಮೇಶ ಜಾರಕಿಹೊಳಿ ಹೇಳಲೆತ್ನಿಸಿದ್ದಾರೆ. ಪಕ್ಷದ ಅಧ್ಯಕ್ಷರಲ್ಲದ ರಮೇಶ ಅವರು ಹೇಗೆ ಅವರಿವರಿಗೆ ಟಿಕೇಟ್ ಕೊಡಿಸುವುದಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಸತೀಶ ಆಕ್ಷೇಪವೆತ್ತಿದ್ದಾರೆ.ಇಬ್ಬರ ನಡುವಿನ ವಾದ ವಿವಾದ ಕೇಳಿದ ಮುಖ್ಯಮಂತ್ರಿ ಮತ್ತು ಅಧ್ಯಕ್ಷರು ಸಚಿವ ರಮೇಶ ಅವರಿಗೆ ಬುದ್ಧಿ ಮಶತು ಹೇಳಿ ತಣ್ಣಗಾಗಿಸಿದರು ಎಂದು ಮೂಲಗಳು ತಿಳಿಸಿವೆ.

ಬೆಳಗಾವಿ ಜಿಲ್ಲೆಯ ಲಕ್ಷ್ಮೀ ಹೆಬ್ಬಾಳಕರ,ಅಂಜಲಿ ನಿಂಬಾಳಕರ, ಶಾಮ ಘಾಟಗೆ ಸೇರಿದಂತೆ ಇತರ ಮುಖಂಡರು ಕೆಪಿಸಿಸಿ ಕಚೇರಿಯಲ್ಲಿ ಉಪಸ್ಥಿತರಿದ್ದರು ಎಂದು ಮೂಲಗಳು ತಿಳಿಸಿವೆ.
ಇಬ್ಬರು ಸಹೋದರರು ತಮ್ಮಲ್ಲೇ ಜಗಳ ಮಾಡಿಕೊಂಡರೆ ಪಕ್ಷದ ಬೆಳವಣಿಗೆಗೆ ಕುಂದಾಗುತ್ತದೆ ಎಂದು ಸ್ವತಃ ಸಿಎಂ ಇಬ್ಬರಿಗೂ ಬುದ್ಧಿವಾದ ಹೇಳಿದ್ದಾರೆ.ಈ ಮಧ್ಯೆ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಗುದ್ದಾಟ ಮರೆಮಾಚಲು ಇಬ್ಬರೂ ಸಹೋದರರು ಒಂದಾದ ಫೋಟೋ ಕಳಿಸಿ ಪ್ರಕರಣಕ್ಕೆ ತೆರೆ ಎಳೆದಿದ್ದಾರೆ.