SHARE

ಬೆಳಗಾವಿ: ಬರದಿಂದ ಕಂಗೆಟ್ಟ ಜನರಿಗೆ ಕುಡಿಯುವ ನೀರು ಸಮರ್ಪಕವಾಗಿ ವಿತರಿಸುತ್ತಿರುವುದಾಗಿ ಜಿಲ್ಲಾಡಳಿತ ಹೇಳುತ್ತಿರುವ ಮಧ್ಯೆ ಮಲೆನಾಡ ಸೆರಗಿನ ಖಾನಾಪುರ ಪಟ್ಟಣದ ನಾಯಿಕ ಗಲ್ಲಿ ಜನತೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಜಿಲ್ಲಾಧಿಕಾರಿ ಕಚೇರಿಗೆ ಅಲೆದಾಡುತ್ತಿದ್ದಾರೆ.ಕುಡಿಯುವ ನೀರಿನ ಸಮಸ್ಯೆಗೆ ಸ್ಥಳದಲ್ಲೇ ನಿರ್ಧಾರ ಕೈಗೊಂಡು ಪರಿಹಾರ ಮಾಡುವಂತೆ ಎಸಿ, ತಹಶೀಲ್ದಾರ ಹಾಗೂ ಪಟ್ಟಣ ಪಂಚಾಯಿತಿ ಹಾಗೂ ನಗರಸಭೆಗಳಿಗೆ ಜಿಲ್ಲಾಧಿಕಾರಿ ಹಲವು ಸುತ್ತಿನ ಸಭೆಗಳಲ್ಲಿ ಕಟದಟುನಿಟ್ಟಾಗಿ ನಿರ್ದೇಶಿಸಿದ್ದಾರೆ.

ಆದರೆ ಸೂಕ್ತ ಕ್ರಮ ವಹಿಸಿ ನೀರು ಒದಗಿಸುವುದು ಬಿಟ್ಟು ಖಾನಾಪುರ ಮುಖ್ಯಾಧಿಕಾರಿ ಡಿಸಿಗೆ ಅನಾವಶ್ಯಕ ಪತ್ರ ಬರೆಯುವುದರಲ್ಲೇ ಈಗಾಗಲೇ ಎರಡು ತಿಂಗಳು ಕಾಲಹರಣ ಮಾಡಿದ್ದಾರೆ. ಕಳೆದ ಸಭೆಯಲ್ಲಿ ಜನತೆಗೆ ಕುಡಿಯುವ ನೀರು ಒದಗಿಸುವುದು ಆದ್ಯತೆ ಆಗಬೇಕು. ಅಲ್ಲದೇ ಎಸ್ ಸಿ/ ಎಸ್ ಟಿ ಜನತೆಗೆ ಪ್ರತಮಾಧ್ಯತೆ ಮೇರೆಗೆ ನೀರು ಒದಗಿಸಲು ಡಿಸಿ ನಿರ್ದೇಶನ ನೀಡಿದ್ದರೂ ಖಾನಾಪುರ ಪುರಸಭೆ ಮುಖ್ಯಾಧಿಕಾರಿ ಉದಾಸೀನತೆ ತೋರಿರುವುದು ಬೆಳಕಿಗೆ ಬಂದಿದೆ.ಸುಮಾರು 1000 ಜನಸಂಖ್ಯೆ ಹೊಂದಿರುವ ನಾಯಿಕ ಗಲಿಯ ಜನತೆಗೆ ಕುಡಿಯುವ ನೀರು ಒದಗಿಸಲು ವಿಫಲವಾಗಿರುವ ಮುಖ್ಯಾಧಿಕಾರಿ ಕಳೆದ ಎಪ್ರೀಲ್ 5 ರಂದು ಜಿಲ್ಕಾಧಿಕಾರಿಗೆ ಪತ್ರ ಬರೆದು ಜಿಲ್ಲಾಧಿಕಾರಿಯೇ ನೀರು ಒದಗಿಸಬೆಕೇನೊ ಎಂಬಂತೆ ಪತ್ರ ಬರೆದು ಕೈಚೆಲ್ಲಿ ಮೈ ಮರೆತಿದ್ದಾರೆ.

ಬರದಿಂದ ಕಂಗೆಟ್ಡ ಎಸ್ ಸಿ/ ಎಸ್ ಟಿ ಜನತೆಗೆ ನೀರು ಒದಗಿಸುವಲ್ಲು ಖಾನಾಪುರ ಪುರಸಭೆ ಮುಖ್ಯಾಧಿಕಾರಿ ಅಶೋಕ ಮಠದ, ಎಂಜುನೀಯರ್ ಅವರು ವಿಫಲರಾಗಿದ್ದು ಇನ್ನೇನು ಮಾನ್ಸೂನ್ ಪ್ರಾರಂಭವಾಗಲು ಒಂದೇ ವಾರ ಬಾಕಿ ಇದ್ದಾಗ ಇನ್ನೇನು ಮಾಡುತ್ತಾರೆ ಎಂಬ ಪ್ರಶ್ನೆ ಮೂಡಿದೆ. ಇಡೀ ಬೇಸಿಗೆಗಾಲವೇ ಕಳೆದು ಹೋದರೂ ಜನರ ಬೇಡಿಕೆ ನಿರಗಲಕ್ಷಿಸಿ, ಡಿಸಿ ಆದೇಶ ಉದಾಸೀನ ಮಾಡಿದ ಪಟ್ಟಣ ಪಂಚಾಯತಿ ನಡೆ ಅಯ್ಯೋ ಎನ್ನಿಸುವಂತಿದೆ.

ವಿಷಯ ಗಮನಕ್ಕೆ ಬರುತ್ತಿದ್ದಂತೆ ವಿಸ್ಮಯಗೊಂಡ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಖಾನಾಪುರ ತಹಶೀಲ್ದಾರ ಅವರಿಗೆ ನೀರಿನ ಸಮಸ್ಯೆ ಬಗೆಹರಿಸಲು ತುರ್ತುಕ್ರಮಕ್ಕೆ ಸೂಚಿಸಿದ್ದಾರೆ. ದಲಿತರ ಕಾಲನಿಗೆ ಕುಡಿಯುವ ನೀರು ಹರಿಯುವುದೇ ಕಾಯ್ದುನೋಡಬೇಕಿದೆ.