SHARE

Report By: Ashok Chandargi
ಬೆಳಗಾವಿ: ಅಂದು ಎಸ್.ಪಿ.ಕೆ.ನಾರಾಯಣ,ಇಂದು ಡಿ.ಸಿ.ಜಯರಾಮ, ಅಂದು ಶರದ ಪವಾರ ಅವರಿಗೆ ಬೆಳಗಾವಿ ಪ್ರವೇಶ ನಿಷೇಧ.ಇಂದು ಮಹಾರಾಷ್ಟ್ರದ ಸಚಿವದ್ವಯರಿಗೆ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ.1986 ರ ಜೂನ್ ಒಂದರಂದು ಮಹಾರಾಷ್ಟ್ರದ ಧುರೀಣ ಬೆಳಗಾವಿಯಲ್ಲಿ “ಸೀಮಾ ಲಢಾಯಿ” ಆರಂಭಿಸಿದರು.ಅವರು ಬೆಳಗಾವಿಯನ್ನು ಪ್ರವೇಶಿಸದಂತೆ ಜಿಲ್ಲೆಯ ಎಸ್.ಪಿ.ಶ್ರೀ ಕೆ.ನಾರಾಯಣ ನಿರ್ಬಂಧ ಹೇರಿದರು.ಆದರೆ ಹಿಂದಿನ ದಿನ ರಾತ್ರಿಯೇ ಶರದ ಪವಾರ ಮಾರುವೇಷದಲ್ಲಿ ಪೋಲೀಸರ ಕಣ್ಣು ತಪ್ಪಿಸಿ ಬೆಳಗಾವಿ ಪ್ರವೇಶಿಸಿ ಅಡಗಿಕೊಂಡು ಕುಳಿತರು.ಜೂನ್ ಒಂದರಂದು ಚೆನ್ನಮ್ಮ ವೃತ್ತದಲ್ಲಿ ಸತ್ಯಾಗ್ರಹ ನಡೆಸಲು ಧಿಡೀರ್ ಪ್ರತ್ಯಕ್ಷರಾದರು.ಅವರನ್ನು ನಾರಾಯಣರು ಬಂಧಿಸಿದರು.

1986 ರ ನಂತರ ಇಲ್ಲಿಯವರೆಗೂ ಮಹಾರಾಷ್ಟ್ರದ ನೂರಾರು ನಾಯಕರು ಬೆಳಗಾವಿಗೆ ಬಂದು ಸಾಕಷ್ಟು ಪ್ರಚೋದನಾತ್ಮಕ ಭಾಷಣಗಳನ್ನು ಮಾಡಿ ಹೋಗಿದ್ದಾರೆ.ಯಾರ ಮೇಲೂ ಯಾವ ಕ್ರಮವನ್ನು ಕೈಕೊಳ್ಳಲಾಗಿರಲಿಲ್ಲ.ಅಲ್ಲಿಯ ನಾಯಕರು ಬೆಳಗಾವಿ ಪ್ರವೇಶಿಸದಂತೆ ನಿಷೇಧಿಸಬೇಕೆಂದು ಕನ್ನಡ ಸಂಘಟನೆಗಳು ಸಾಕಷ್ಟು ಬಾರಿ ಒತ್ತಾಯಿಸಿದ್ದರೂ ಏನೂ ಆಗಿರಲಿಲ್ಲ.

ಈಗ ನಮ್ಮ ಕನ್ನಡದ ಕಟ್ಟಾಳು ಡಿಸಿ ಶ್ರೀ ಜಯರಾಮ ಅವರು ಭಾರೀ ದಿಟ್ಟತನ ಪ್ರದರ್ಶಿಸಿದ್ದಾರೆ.ಗುರುವಾರ ಆಗಮಿಸಲಿದ್ದ ಮಹಾರಾಷ್ಟ್ರದ ಸಚಿವರಿಬ್ಬರು ಜಿಲ್ಲೆಯನ್ನು ಪ್ರವೇಶಿಸದಂತೆ ನಿಷೇಧಿಸಿದ್ದಾರೆ.ಈಗ ಆ ಸಚಿವರು ಹಾಗೂ ಅಲ್ಲಿಯ ಸರಕಾರ ಹೇಗೆ ಪ್ರತಿಕ್ರಿಯಿಸಬಹುದು ಎಂಬುದನ್ನು ಕಾದು ನೋಡಬೇಕು.ಅಲ್ಲದೇ ನಮ್ಮ ರಾಜಕೀಯ ನಾಯಕರು ಹೇಗೆ ವರ್ತಿಸುವರೆಂಬುದೂ ಅಷ್ಟೇ ಕುತೂಹಲಕಾರಿಯಾಗಿದೆ.