SHARE

ಬೆಳಗಾವಿ: 2012ನೇ ಬ್ಯಾಚ್ ನ ಕರ್ನಾಟಕ ಕೇಡರ್ ನ ಐಪಿಎಸ್ ಅಧಿಕಾರಿ ಬೆಳಗಾವಿ ಕಮಿಷ್ನರೇಟ್ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಜಿ.ರಾಧಿಕಾ ಬೀದರ್ ಎಸ್ಪಿಯಾಗಿ ಗುರುವಾರ ವರ್ಗಾವಣೆಗೊಂಡಿದ್ದಾರೆ.

ಕಮಿಷ್ನರೇಟ್ ಪ್ರಾರಂಭವಾದ ನಂತರ ನಗರದ ಎರಡನೇ ಐಪಿಎಸ್ ದರ್ಜೆಯ ಡಿಸಿಪಿಯಾಗಿ ಕಳೆದ ಒಂದು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದರು.ವಿಜ್ಞಾಪಣೆ ಹೊತ್ತು ಬರುವ ಜನತೆ, ಹಿರಿಕಿರಿಯ ಅಧಿಕಾರಿಗಳು ಹಾಗೂ ಜನತೆಯೊಂದಿಗೆ ಉತ್ತಮ ಭಾಂದವ್ಯದಿಂದ ನಗರದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಇಲಾಖೆಯ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಜಿ. ರಾಧಿಕಾ ದುಡಿದಿದ್ದರು.

ಬೆಳಗಾವಿಗೆ ನೂತನ ಡಿಸಿಪಿ ಯಾರೆಂದು ಸರಕಾರ ತಿಳಿಸಿಲ್ಲ. ಬೆಳಗಾವಿಯ ಹವಾಮಾನ, ಸಂಸ್ಕೃತಿ ಮನಸೆಳೆದಿದ್ದು ಒಂದೇ ವರ್ಷದಲ್ಲಿ ಇಲಾಖಾ ಅಪರಿಮಿತ ಅನುಭವ ಪಡೆಯುವ ಅವಕಾಶ ಸಿಕ್ಕಿತು ಎಂದು ರಾಧಿಕಾ ಪ್ರತಿಕ್ರಿಯಿಸಿದ್ದಾರೆ.