SHARE
ಬೆಳಗಾವಿ:ಬೆಳಗಾವಿಯಲ್ಲಿ ನಡೆಯುತ್ತಿರುವ ಎಂಇಎಸ್ ರ್ಯಾಲಿಗೆ ಆಗಮಿಸುತ್ತಿದ್ದ ಮಹಾರಾಷ್ಟ್ರದ ಸಚಿವ ದಿವಾಕರ ರಾವತ್ ಕುಗನೊಳ್ಳಿ ಚೆಕ್ ಪೊಸ್ಟ್ ನಿಂದ ಬಂಧನಕ್ಕೆ ಬೆದರಿ ಹಿಂದಿರುಗಿದ್ದಾರೆ. ಇಂದಿನಿಂದ 3 ದಿನಗಳ ವರೆಗೆ ಮಹಾರಾಷ್ಟ್ರದ ಸಚಿವ ದಿವಾಕರ ರಾವತ್ ಮತ್ತು ದೀಪಕ್ ಸಾಂವತಗೆ ಬೆಳಗಾವಿ ಗಡಿ ಪ್ರವೇಶ ನಿರ್ಬಂಧಿಸಿದ ಬೆಳಗಾವಿ ಜಿಲ್ಲಾಡಳಿತದ ಕ್ರಮದಿಂದ ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ಸಾದ ಸಚಿವ ರಾವತ್,ನಿರ್ಬಂಧ ಆದೇಶ ತೊರಿಸುತ್ತಿದ್ದಂತೆ ಮರಳಿ ಕೊಲ್ಲಾಪುರಕ್ಕೆ ತೆರಳಿದ್ದಾರೆ. ಸಚಿವ ಮತ್ತು ಹಿಂಬಾಲಕರು ದಿವಾಕರ ರಾವತ್, ದೀಪಕ್ ಸಾವಂತ ಮಹಾರಾಷ್ಟ್ರದ  ಸಚಿವರು, ಶಿವಸೇನೆಯ ಪಕ್ಷದವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಕುಗನೊಳ್ಳಿ ಚೆಕ್ ಪೊಸ್ಟ್ನಿಂದ ಹಿಂದಿರುಗಿದ್ದಾರೆ.
ಮಹಾರಾಷ್ಟ್ರ ಸಾರಿಗೆ ಸಚಿವ ದಿವಾಕರರಿಂದ ಹೇಳಿಕೆ ನೀಡಿ ಕರ್ನಾಟಕ ಸರ್ಕಾರ ತನಗೆ ನಿಷೇಧ ಹೇರಿ ಹೊರಡಿಸಿದ ಆದೇಶಕ್ಕೆ ಬದ್ದ, ಕೋಗನೋಳಿ ಯಿಂದಲೆ ಮಹಾರಾಷ್ಟ್ರ ಕ್ಕೆ ಮರಳುತ್ತೇನೆ, ಬೆಳಗಾವಿ ಎಂಇಎಸ್ ಪ್ರತಿಭಟನಾ ರ್ಯಾಲಿಗೆ ಭಾಗವಹಿಸಲು ಹೋಗುತ್ತಿದ್ದೆ, ಮಹಾರಾಷ್ಟ್ರ ಸರ್ಕಾರದ ಪ್ರತಿನಿಧಿಯಾಗಿ ಹೋಗುತ್ತಿದ್ದೆ, ಕರ್ನಾಟಕ ಸರ್ಕಾರ ಹೊರಡಿಸಿದ ಆದೇಶ ನನಗೆ ತಿಳಿದಿಲ್ಲ, ಕನ್ನಡ ಭಾಷೆಯಲ್ಲಿ ಇರುವ ಕಾರಣ  ತನಗೆ ತಿಳಿದಿಲ್ಲ,  ಮರಾಠಿ ಭಾಷೆಯಲ್ಲಿ ಕರ್ನಾಟಕ ಸಿಬ್ಬಂದಿ ನೋಟಿಸ್ ಬಗ್ಗೆ ಮಾಹಿತಿ ನೀಡಿದರು. ಹೀಗಾಗಿ ಕರ್ನಾಟಕದ ಪೊಲೀಸ್ ಸಿಬ್ಬಂದಿ ಮರಾಠಿ ಭಾಷೆಯಲ್ಲಿ ವಿವರಣೆ ನೀಡಿದ್ದು ನನಗೆ ಖುಷಿ ತಂದಿದೆ, ಕಾನೂನು ಗೌರವಿಸಿ ಮರಳುತ್ತಿರುವುದಾಗಿ ಹೇಳಿಕೆ ನೀಡಿ ಸಚಿವದ್ವಯರು ಹಿಂದಿರುಗಿದ್ದಾರೆ.