SHARE

ಬೆಳಗಾವಿ: ಹಗಲು ದರೋಡೆಕೋರ, ಗ್ರಾಹಕರ ರಕ್ತ ಹೀರುವ ಹೊಟೇಲ್, ಕ್ಯಾಂಟೀನಗಳ ಬಣ್ಣ ಬಯಲು ಮಾಡಲೆತ್ನಿಸಿರುವ ಯುವ ನ್ಯಾಯವಾದಿ ಹರ್ಷವರ್ಧನ ಅವರಿಗೆ ಕಾಕತಿಯ ಖಾಸಗಿ ಹೊಟೇಲ್ ಒಂದು ಕೊಲೆ ಬೆದರಿಕೆ ಹಾಕಿದ ಬಗ್ಗೆ ಇಂದು ಬಾರ್ ಅಸೋಸಿಯೇಶನ್ ಎಚ್ಚರಿಕೆ ನಂತರ ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಕಾಕತಿ ಐರಿಷ್ ಹೌಸ್ ಹೊಟೇಲ್ ಗೆ ಗೆಳೆಯನ ಹುಟ್ಟುಹಬ್ಬ ಆಚರಿಸಲು ಕಳೆದ ಮೇ. 20 ಕ್ಕೆ ತೆರಳಿದ್ದ ವೇಳೆ ಹೃಷವರ್ಧನ ಹೋರಾಟದ ಬಗ್ಗೆ ತಿಳಿದಿದ್ದ ಕೆಲವರು ಕುಂಟು ಜಗಳ ತೆಗೆದರು ಎನ್ನಲಾಗಿದೆ. ಸೇವಾತೆರಿಗೆ ಹೊಟೇಲ್ ಆಕರಿಸುತ್ತಿದ್ದು, ಎಂಆರ್ ಪಿ ಗಿಂತ ಹೆಚ್ಚು ಬೆಲೆಗೆ ನೀರು ಹಾಗೂ ಪಾನೀಯ ಉತ್ಪನ್ನಗಳನ್ನು ಮಾರುತ್ತಿರುವುದರ ಬಗ್ಗೆ ಕೆಲವು ಗ್ರಾಹಕರು ಹರ್ಷವರ್ಧನ ಬಳಿ ದೂರಿದಾಗ ಮ್ಯಾನೆಜರ್ ಅವರನ್ನು ಹರ್ಷವರ್ಧನ ಕೇಳಿದಾಗ್ ಗ್ರಾಹಕನೊಬ್ಬನ ಸರ್ವೀಸ್ ಚಾರ್ಜ್ ಹಿಂಪಡೆದಿದ್ದ ಹೊಟೇಲ್ ಆ ನಂತರ ಕ್ಷುದ್ರಗೊಂಡು ಈ ಕೃತ್ಯಕ್ಕೆ ಮುಂದಾಯಿತು ಎನ್ನಲಾಗಿದೆ.

ಈ ಸಂದರ್ಭ ಹೊಟೇಲ್ ಸಿಬ್ಬಂಧಿ ನ್ಯಾಯವಾದಿಗೆ ತಳ್ಳಾಡಿ ಬೆದರಿಕೆ ಹಾಕಿದ ಘಟನೆ ನಡೆದಿದೆ.ಈ ಬಗ್ಗೆ ಕಾಕತಿ ಠಾಣೆಯಲ್ಲಿ 341, 504, 506 ,ಅಡಿ ಪ್ರಕರಣ ದಾಖಲಾಗಿದೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿತರು ಪರಾರಿಯಾಗಿದ್ದು, ಪೊಲೀಸರು ಪತ್ತೆ ಹಚ್ಚುವ ನಿರೀಕ್ಷೆ ಇದೆ.