SHARE

ಬೆಳಗಾವಿ: ಕಳಸಾ ಬಂಡೂರಿ ಇತ್ಯರ್ಥಕ್ಕೆ ಮುಖ್ಯಮಂತ್ರಿಗೆ ಮನಸ್ಸಿದ್ದರೆ ಮುಂದೆ ಬಂದು ಗೋವಾ ಮಹಾರಾಷ್ಟ್ರ ವಿಪಕ್ಷ ನಾಯಕರನ್ನು ಒಪ್ಪಿಸಲಿ,ನಾನು ಇಬ್ಬರೂ ಮುಖ್ಯಮಂತ್ರಿಗಳನ್ನು ಒಪ್ಪಿಸುತ್ತೇನೆ ಎಂದು ಯಡಿಯೂರಪ್ಪ ಸಿಎಂಗೆ ಪಂಥಾಹ್ವಾನ ನೀಡಿದ್ದಾರೆ.

ವಿಧಾನಮಂಡಳ ಅಧಿವೇಶನ ಪ್ರಾರಂಭವಾಗಿದೆ ಜಗದೀಶ ಶೆಟ್ಟರ್ ಭೀಕರ ಬರಗಾಲದ ಚರ್ಚೆ ಪ್ರಾರಂಭ ಮಾಡಿದ್ದಾರೆ, ನಾನು 13 ಜಿಲ್ಲೆಗಳ ಬರ ಪ್ರವಾಸ ಮಾಡಿದ್ದೇನೆ.ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನನ್ನ ಬರ ಅಧ್ಯಯನ ಪ್ರವಾಸಕ್ಕೆ ವ್ಯಂಗ್ಯ ಮಾಡಿದ್ದರು ಮಳೆ ಬರಲೇ ಇಲ್ಲ. ಮಳೆ ಬಂದು ನಾನು ಛತ್ರಿ ಹಿಡಿದು ಓಡಾಡುವಂತಾಗಲಿ ಎಂದು ಬಿಎಸ್ವೈ ತಿರುಗೇಟು ನೀಡಿದರು.ಮುಖ್ಯಮಂತ್ರಿ ಮತ್ತು ಸಚಿವ ಸಂಪುಟಕ್ಕೆ ಜವಾಬ್ದಾರಿ ಇಲ್ಲ ಆದ್ದರಿಂದ ಇನ್ನೊಂದು ಬರ ಅಧ್ಯಯನ ರಾಜ್ಯ ಪ್ರವಾಸ ಬಿಜೆಪಿ ಮಾಡಲಿದೆ ಯಾವುದೇ ಜಲಾಶಯಗಳಲ್ಲಿ ಈಗ ನೀರಿಲ್ಲ.

2016-17 ನೇ ಸಾಲಿನಲ್ಲಿ 57 ರೈತರು ಬೆಳಗಾವಿ ಜಿಲ್ಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳಸಾ ಬಂಡೂರಿ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕತೆ ಸಿಎಂಗೆ ಇದ್ದರೆ ಮಹಾರಾಷ್ಟ್ರ ಗೋವಾ ರಾಜ್ಯಗಳ ವಿರೋಧ ಪಕ್ಷಗಳನ್ನು ಒಪ್ಪಿಸಿ,ನಾವು ಆಡಳಿತ ಸರಕಾರಗಳನ್ನು ಒಪ್ಪಿಸುತ್ತೇನೆ.ಕೇಂದ್ರ ಸಚಿವ ಅನಂತಕುಮಾರ ಸಹ ಕಳಸಾ ಬಂಡೂರಿ ಬಗೆಹರಿಸಲು ಮನಸ್ಸು ಮಾಡಿದ್ದಾರೆ Out of tribunal ಅಡಿ ಮಾತುಕತೆ ಮಾಡುವುದಾದರೆ ಇಬ್ಬರೂ ಸಿಎಂಗಳನ್ನು ನಾನು ಒಪ್ಪಿಸುತ್ತೇನೆ ಎಂದು ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದರು.

ಬೆಳಗಾವಿ ಸುವರ್ಣಸೌಧ ಬಳಕೆಯಾಗದೆ ಹಾಗೇ ಉಳಿದಿದೆ ಸುಮಾರು ನಾಲ್ಕೈದು ಮಿನಿಸ್ಟರಗಳನ್ನು ಇಲ್ಲಿ ಶಿಫ್ಟ್ ಮಾಡಿ ಎಂದು ಯಡಿಯೂರಪ್ಪ ಸರಕಾರವನ್ನು ಒತ್ತಾಯಿಸಿದರು.ಅಕ್ರಮ ಮರಳು ಸಾಗಾಣಿಕ ಅವ್ಯಾಹತವಾಗಿ ನಡೆಯುತ್ತಿದೆ ಕಾಂಗ್ರೆಸ್ ನಾಯಕರೇ ದಂಧೆಯಲ್ಲಿ ತೊಡಗಿದ್ದಾರೆ ಕರ್ನಾಟಕದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಭ್ರಷ್ಟಾಚಾರದಲ್ಕಿ ಕಾಂಗ್ರೆಸ್ ಮೇಲ್ಪಂತಿ ಹಾಕಿದೆ, ಲೋಕಾಯುಕ್ತ ಶಕ್ತಿಯನ್ನು ಸಿದ್ದರಾಮಯ್ಯ ಕಿತ್ತು ಹಾಕಿದ್ದಾರೆ,ಎಸಿಬಿಯನ್ನು ಕಿರುಕುಳ ಮತ್ತು ಬೇಕಾದವರಿಗೆ ರಕ್ಷಣೆ ಕೊಡಲು ಬಳಸುತ್ತಿದ್ದಾರೆ, ಪ್ರಾಮಾಣಿಕ ಎಸ್ಪಿ ಗಿರೀಶ ಅವರನ್ನು ಮುಖ್ಯಮಂತ್ರಿ ಬದಲಿಸಬಾರದಾಗಿತ್ತು. ಸರಕಾರ ಸಮಸ್ಯೆಗಳ ಪರಿಹಾರದ ಪ್ರಯತ್ನ ಮಾಡುತ್ತಿಲ್ಲ.

ನಿನ್ನೆ ಮಹಾರಾಷ್ಟ್ರ ಸರಕಾರದ ಸಹಕಾರಿ ಸಂಘದ ಸಾಲ ಮನ್ನಾ, ಉತ್ತರ ಪ್ರದೇಶ ಸಹ ಸಾಲ ಮನ್ನಾ ಮಾಡಿದೆ, ಅದರಂತೆ ಸಾಲ ಮನ್ನಾ ಮಾಡಿ ಇಲ್ಲದಿದ್ದರೆ ಜೂ.10 ರಂದು ಬೆಂಗಳೂರಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲಾಗುವುದು.

ಡಾ. ಅಂಬೇಡ್ಕರ್ ಅವರನ್ನು ದೆಹಲಿ ರಾಜಘಾಟ ಬದಲು ಮುಂಬಯಿನ ದಾದರನಲ್ಲಿ ಶವಸಂಸ್ಕಾರ ಮಾಡಿದ ಕಾಂಗ್ರೆಸ್ ಸರಕಾರ ದಲಿತರ ಬಗ್ಗೆ ಮಾತನಾಡುವ ನೈತಿಕತೆ ಉಳಿಸಿಕೊಂಡಿಲ್ಲ.ಬಿಜೆಪಿಯ ಸಂಸದ, ಶಾಸಕರು, ಪದಾಧಿಕಾರಿಗಳು ಈಗಾಗಲೇ ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಕಾಂಗ್ರೆಸ್ ಟ್ರಿಬ್ಯೂನಲ್ ರಚಿಸಿ ಮಹಾದಾಯಿ ವಿವಾದ ಜೀವಂತ ಇಟ್ಟಿದೆ ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ತತ್‍ಕ್ಷಣ ನಾಲ್ಕಾರು ಇಲಾಖೆಗಳನ್ನು ಬೆಳಗಾವಿ ಸುವರ್ಣ ಸೌಧಕ್ಕೆ ಬದಲಿಸಲಾಗುವುದು ಎಂದರು. ಡಾ.ವಿಶ್ವನಾಥ ಪಾಟೀಲ,ಉಮೇಶ ಕತ್ತಿ,ಲಕ್ಷ್ಮಣ ಸವದಿ, ದುರ್ಯೋಧನ ಐಹೊಳೆ, ರಾಜೇಂದ್ರ ಹರಕುಣಿ, ಮಹಾಂತೇಷ ಕವಟಗಿಮಠ, ಬಸವರಾಜ ರೊಟ್ಟಿ ಸೇರಿ ಇತರರು ಹಾಜರಿದ್ದರು.