SHARE

ಬೆಳಗಾವಿ: ಜಿಲ್ಲಾ ರಾಣಿ ಚನ್ನಮ್ನ ಮಹಿಳಾ ಸಹಕಾರಿ ಬ್ಯಾಂಕ್ ಬೆಳಗಾವಿ ಇದರ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಜೂ. 10 ಕ್ಕೆ ನಡೆಯಲಿದೆ.ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಬ್ಯಾಂಕ್ ಅಧ್ಯಕ್ಷೆ ಆಶಾ ಪ್ರಭಾಕರ ಕೋರೆ ಶನಿವಾರ ಜೂನ್ 10 ಕ್ಕೆ ನಗರದ ಕಾಲೇಜು ರಸ್ತೆಯ ಮಲಬಾರ್ ಗೋಲ್ಡ್ ಮೇಲಿನ ಮೊದಲ ಮಹಡಿಯಲ್ಲಿ ಉದ್ಘಾಟನೆಯಾಗಲಿದ್ದು ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು,ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಹಾಗೂ ಡಿಸಿಪಿ ಜಿ. ರಾಧಿಕಾ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದರು.ಮಹಿಳೆಯರು ಆರ್ಥಿಕ ಸಶಕ್ತರಾಗಿ ಸ್ವ ಉದ್ಯೋಗ ಕೈಗೊಳ್ಳು ಮತ್ತು ಆರ್ಥಿಕ ಅವಶ್ಯಕತೆಗೆ ಸಹಾಯಕವಾಗಲು ಬ್ಯಾಂಕ್ ಶ್ರಮಿಸುತ್ತಿದೆ ಎಂದರು.