SHARE

ಬೆಳಗಾವಿ: ಹಿಂದೂ ರಾಷ್ಟ್ರತ್ವ ಕಾಯ್ದುಕೊಂಡು ಸ್ಥಾಪಿಸುವ ಸಂಬಂಧ ಮುಂಬರುವ ನಿರ್ಧಾರ ನಿರ್ಧರಿಸುಕ್ಕೆ ಜೂನ 14 ರಿಂದ 17 ರವರೆಗೆ ಗೋವಾದಲ್ಲಿ 21 ರಾಜ್ಯ ಸಂಘಟನೆಗಳಿಂದ ಗೋವಾದಲ್ಲಿ ಆರನೇ ಅಖಿಲ ಭಾರತೀಯ ಹಿಂದೂ ಅಧಿವೇಶನ ನಡೆಸಲಾಗುವುದು ಎಂದು ಹಿಂದೂ ಜನ ಜಾಗೃತಿಯ ಉತ್ತರ ಕರ್ನಾಟಕದ ಮುಖಂಡ ವಿಜಯ ರೇಬಣಕರ ಇಂದಿಲ್ಲಿ ಹೇಳಿದರು.

ಅವರು ಶನಿವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದುತ್ವನಿಷ್ಠ ಸಂಘಟನೆಗಳ ರಾಷ್ಟ್ರ ವ್ಯಾಪಿ ಸಂಘಟನೆಯನ್ನು ಸ್ಥಾಪಿಸುವ ಉದ್ದೇಶದಿಂದ ಜೂನ 14 ರಿಂದ ಗೋವಾದಲ್ಲಿ ಅಖಿಲ ಭಾರತ ಹಿಂದೂ ಅಧಿವೇಶನ ನಡೆಸಲಾಗುತ್ತಿದೆ ಎಂದರು. ಈ ಅಧಿವೇಶನದಲ್ಲಿ ಬಾಗಲಕೋಟೆ, ಉಡುಪಿ, ದಕ್ಷಿಣ ಕನ್ನಡ, ಧಾರವಾಡ, ಬೆಂಗಳೂರು, ಬೆಳಗಾವಿ, ಹಾಸನ ತುಮಕೂರು ಜಿಲ್ಲೆ ಸೇರಿದಂತೆ 50 ಕ್ಕೂ ಹೆಚ್ಚು ಹಿಂದೂತ್ವ ವಾದಿಗಳು ಭಾಗವಹಿಸಲಿದ್ದಾರೆ.ಕೇಂದ್ರದಲ್ಲಿ ಹಿಂದು‌ತ್ವ ಸರಕಾರವಿದ್ದರೂ ಹಿಂದೂಗಳ ಪ್ರಮುಖ ಬೇಡಿಕೆಯಾದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ,ಗೋ ರಕ್ಷಣೆಯಂತ ಬೇಡಿಕೆಗಳು ಸೇರಿದಂತೆ ಧರ್ಮ ರಕ್ಷಣೆಯಾಗುತ್ತಿಲ್ಲ ಎಂದು ಕಳವಳವ್ಯಕ್ತಪಡೆಸಿದರು. ಸುದ್ದಿಗೋಷ್ಠಿಯಲ್ಲಿ ಚೇತನ ಮಂಡಿವಡಕರ, ಜ್ಯೋತಿ ದಾಬಣಕರ, ವೆಂಕಟೇಶ ಶಿಂಧೆ ಮೊದಲಾದವರು ಹಾಜರಿದ್ದರು