SHARE

ಬೆಳಗಾವಿ: ಮಧ್ಯಪ್ರದೇಶದಲ್ಲಿ ರೈತರ ಮೇಲೆ ನಡೆದ ಸರಕಾರದ ಗದಾ ಪ್ರಹಾರ ಹಾಗೂ ಸಾಂತ್ವನ ಹೇಳಲು ಬಂದ ರಾಹುಲ್ ಗಾಂಧಿ ಅವರನ್ನು ಪೊಲೀಸರು ಬಂಧಿಸಿದ ಯತ್ನ ವಿರೋಧಿಸಿ ಬೆಳಗಾವಿ ಯುಥ್ ಕಾಂಗ್ರೆಸ್ ಕಾರ್ಯಕರ್ತರು ರೈಲು ತಡೆದು ಪ್ರತಿಭಟನೆ ನಡೆಸಲು ಹೊರಟಾಗ ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದ ಘಟನೆ ರವಿವಾರ ನಡೆಯಿತು.ಐವರು ರೈತರನ್ನು ಮಧ್ಯಪ್ರದೇಶ ಸರಕಾರ ವಿನಾಃ ಕಾರಣ ಗುಂಡಿಕ್ಕಿ ಕೊಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಧ್ಯಪ್ರದೇಶದಲ್ಲಿ ಪ್ರತಿಭಟನೆಯಲ್ಲಿ ನಿರತ ರೈತರೊಂದಿಗೆ ಸರಕಾರ ಸೌಜನ್ಯದಿಂದ ವರ್ತಿಸಿ ಅವರ ದೂರು ದುಮ್ಮಾನ ಆಲಿಸಿ ಬೇಡಿಕೆ ಇಡೇರಿಸಬೇಕಿದ್ದ ಸರಕಾರ ದುರ್ವರ್ತನೆ ತೋರಿಸಿದೆ ಎಂದರು. ರೈಲು ನಿಲ್ಲಿಸಲು ಹಳಿಗಳತ್ತ ಹೊರಟಿದ್ದ ಯುವ ನಾಯಕರನ್ನು ಕ್ಯಾಂಪ್ ಠಾಣೆ ಪೊಲೀಸರು ತಡೆದು ನಿಲ್ಲಿಸಿದರು. ಸಾಕಷ್ಟು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.ಡಾ. ಮಾರ್ಟಿನ್, ಮೃಣಾಲ ಹೆಬ್ಬಾಳಕರ, ಅಖೀಬ್ ಬೆಪಾರಿ, ವಿಶಾಲ ದೇಸಾಯಿ, ಸಾಧಿಕ್ ಅಂಕಲಗಿ, ಇರ್ಫಾನ ಜಮಾದಾರ ಸೇರಿ ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.