SHARE

ಬೆಳಗಾವಿ: ಧಾರವಾಡ ಜಿಲ್ಲೆ ವ್ಯಾಪ್ತಿಯ ಕಕ್ಕೇರಿ ಬಳಿಯ ಅಳ್ನಾವರದಲ್ಲಿ ಅನ್ವರ ಹುಸೇನ ಬಾಳೆಕುಂದ್ರಿ(೩೦) ಎಂಬ ಯುವಕ ಮನೆಯಲ್ಲಿನ ನೀರಿನ ಮೋಟಾರ್ ಶಾರ್ಟ್ ಸರ್ಕ್ಯೂಟ್ ‌ಆಗಿ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ.ಗಾಯಾಳುವಿಗೆ ತತ್‍ಕ್ಷಣ ಅಳ್ನಾವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಸಕಾಲ ಸೇವೆಗೆ ವೈದ್ಯರೇ ಇಲ್ಲದೆ ಇರುವುದರಿಂದ ಹಾಗೂ ಉಳಿದ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಸಾವು ಸಂಭವಿಸಿದೆ ಎಂದು ನಗರದ ಜನತೆ ರೊಚ್ಚಿಗೆದ್ದು ಆಸ್ಪತ್ರೆಯ ಸಾಮಗ್ರಿಗಳನ್ನು ಪುಡಿ ಪುಡಿ ಮಾಡಿದ್ದಾರೆ.ವೈದ್ಯ ಆಸ್ಪತ್ರೆಯಲ್ಲಿರಲಿಲ್ಲ, ಸಿಬ್ಬಂಧಿ ಸಕಾಲಕ್ಕೆ ಸ್ಪoದಿಸಲಿಲ್ಲ ಎಂಬುವುದು ಜನತೆಯ ಆಕ್ರೋಶಕ್ಕೆ ಕಾರಣವಾಯಿತು.