SHARE

ಬೆಳಗಾವಿ: ದೇಶಕ್ಕೆ IASನಲ್ಲಿ ಮೊದಲ ರ್ಯಾಂಕ್ ಪಡೆದ ಕೆ. ಆರ್. ನಂದಿನಿ ಬೆಳಗಾವಿ ಜನತೆ ಪ್ರೀತಿ ಆಶೀರ್ವಾದ ತೋರಿಸಿದ್ದಾರೆ ಎಂದು ಅಭಿಮಾನ ಮೆರೆದರು.ಇಂದು ಜಿಲ್ಲಾಡಳಿತದ ಸನ್ಮಾನ ಸ್ವೀಕರಿಸಿ ಮಾತನಾಡಿ ನಂದಿನಿಗೆ ಕೊಟ್ಟ ಅಭಿಮಾನ ನನ್ನ ಜವಾಬ್ದಾರಿ ಹೆಚ್ಚಿಸಿದೆ. UPSC ಪರೀಕ್ಷೆ ಬಹಳ ಕಠಿಣವೇನಲ್ಲ. ಬೀಜದ ಮೇಲಿನ ಗಟ್ಟಿಯಷ್ಟು ಅದು ಗಟ್ಟಿಯಾಗಿದ್ದು ಒಳಗಡೆ ಆ ನಂತರ ಮೆತ್ತಗಾಗಿರುತ್ತದೆ. We should always dream high.Target ಮತ್ತು Aim ದೊಡ್ಡವುಗಳಾಗಿರಬೇಕು. ಸಮಾಜದ ಮೇಲೆ ನನ್ನ ಸಾಲವಿದ್ದು ಆದ್ದರಿಂದ ನಾನು ಸಿವಿಲ್ ಸರ್ವೀಸ್ ಪಾಸ್ ಆಗಲು ಕಾರಣ ಎಂದರು.ಯಾವುದೇ ವೃತ್ತಿ ಆಯ್ಕೆ ಮಾಡಿಕೊಂಡರೂ ನೂರು ಪ್ರತಿಶತ ಅದರ ಮೇಲರ ಮನಸ್ಸಿರಬೇಕು ಎಂದರು.ಕೆಲಸವೇ ಜೀವನದ ವಿಧಾನವಾಗುತ್ತದೆ, ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ ಆಗದು ಕೆಲಸವು ಮುಂದೆ ಎಂಬ ತತ್ವದ ಹಾಡಿನಂತೆ ನಾವು ಬದುಕಿ ಸಾಧಿಸಬೇಕು. ಮಕ್ಕಳನ್ನು ಸಮಾಜಕ್ಕೆ ಆಸ್ತಿಯಾಗಿ ಕೊಡಿ ಹೆಣ್ಣುಮಕ್ಕಳಿಗೆ ಇಂದು ಧನಾತ್ಮಕ ವಾತಾವರಣ ಇದೆ.ಪ್ರಾಸ್ತಾವಿಕವಾಗಿ ಮಾತನಾಡಿದ DC ಎನ್. ಜಯರಾಮ ಸರಕಾರಿ ಹಾಸ್ಟೆಲ್ ಗಳಲ್ಲಿ ಉತ್ತಮ ಸೌಲಭ್ಯವಿರುತ್ತವೆ, ಸದ್ವಿನಿಯೋಗ ಮಾಡಿಕೊಂಡು 90ಪ್ರತಿಶತ ಪಡೆದ ವಿದ್ಯಾರ್ಥಿಗಳು ಅಭಿನಂದನೆಗೆ ಪಾತ್ರರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರು ನಮ್ಮ ಹುಡುಗರು, ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ ನೆರೆಯವರಿಗೂ ಮನೆಯವರಿಗೆ ಅಷ್ಟೇ ತಿಳಿಯವುದು. ಬಡವರನ್ನು ಯಾರೂ ಗುರುತಿಸಲಾರರು ಅಂಥವರನ್ನು ಗುರುತಿಸುವ ಪ್ರಯತ್ನ ನಮ್ಮ ಜಿಲ್ಲಾಡಳಿತ ನಡೆಸಿದೆ. ದೊಡ್ಡ ಹುದ್ದೆ ಗಿಟ್ಟಿಸಿಕೊಂಡು ಸುವರ್ಣಸೌಧಕ್ಕೆ ಬರಲು ವಿದ್ಯಾರ್ಥಿಗಳಿಗೆ ಡಿಸಿ ಕರೆ ನೀಡಿದರು.

ಸಾಹಿತಿ ಪತ್ರಕರ್ತ ಸರಜೂ ಕಾಟಕರ ಮಾತನಾಡಿ ಪುರಸ್ಕಾರ ಮುಂದುವರೆಯಲು ಜಿಲ್ಲಾಧಿಕಾರಿ ನಿಶ್ಚಿತ ಯೋಜನೆ ಜಾರಿಗೊಳಿಸಬೇಕು.ಸಾಧಿಸಬೇಕು ಎಂಬ ಛಲವೇ ಉನ್ನತ ಸಿವಿಲ್ ಸರ್ವೀಸ್ ಪರೀಕ್ಷೆ ಪಾಸ್ ಮಾಡಲು ಸಾಧ್ಯ. ನಂದಿನಿ ಐತಿಹಾಸಿಕ ಶೈಕ್ಷಣಿಕವಂತೆ ಸಾವಿತ್ರಿಭಾಯಿ ಅವರ ಮಗಳು ಎಂದು ಬಣ್ಣಿಸಿದರು. ದೇಶದ ಆಡಳಿತ ರಾಜಕಾರಣಿಗಳ ಬಳಿ ಇಲ್ಲ. ಐಎಎಸ್ ಅಧಿಕಾರಿಗಳ ಬಳಿ ಇರುತ್ತದೆ. ನೆಲಮೂಲದ ಸಂಸ್ಕೃತಿಯನ್ನು ನಾವು ದೊಡ್ಡವರಾದ ಮೇಲೆ ಮರೆಯಬಾರದು.ಉನ್ನತ ಹುದ್ದೆ ಸಮಾಜ ಸೇವೆಗೆ ಬಳಕೆಯಾಗಬೇಕು ಎಂದು ಕಿವಿಮಾತು ಹೇಳಿದರು.ಸಮಾಜದ ಪ್ರತಿನಿಧಿಯಾಗಿ ಅರ್ಜಿ ಹಿಡಿದು ಬರುವ ಜನರ ಸೇವೆಯೇ ಅಧಿಕಾರಿಗಳ ಧ್ಯೇಯವಾಗಬೇಕು ಎಂದರು.

ಸಂಸದ ಸುರೇಶ ಅಂಗಡಿ ಮಾತನಾಡಿ Knowledge is power IAS, IPS ಜತೆಗೆ ರೈತರು ಆಗಬೇಕು. ಕೋಟಿ ವಿಧ್ಯೆಗಳಲ್ಲಿ ಮೇಟಿ ವಿಧ್ಯೆಯೇ ಮೇಲು.ಸಮಾಜದಲ್ಲಿ ಬದುಕುವ ಉತ್ತಮ ಬುದ್ಧಿವಂತಿಕೆ ಬೆಳೆಸಿಕೊಳ್ಳಬೇಕು. ಕೇಂದ್ರ ರಾಜ್ಯ ಸರಕಾರಿ ಹುದ್ದೆಗಳನ್ನು ಹಿಡಿದುಕೊಳ್ಳಿ, ಪ್ರಖ್ಯಾತ ಉದ್ಯಮಿ, enterprenuer ಆಗ್ರಿ, ಓಬೆರಾಯ್, ಅಬ್ರಾಹಾಂನಂಥ ಸಾಧನೆ ಮಾಡ್ರಿ, ಮನೆತನದ ಉದ್ಯೋಗಗಳಲ್ಲೂ ಸಾಧನೆಗಯ್ಯಿರಿ ಎಂದು ತಿಳಿಸಿದರು. ಸರಕಾರದಿಂದ ಎಲ್ಲ ಸವಲತ್ತುಗಳು ವಿದ್ಯಾರ್ಥಿಗಳಿಗೆ ಸಿಗುತ್ತಿವೆ ಎಂದರು. ಕೃಷಿ ಮತ್ತು ನೇಕಾರಿಕರ ಎರೆಡು ಮುಖ್ಯ ಉದ್ಯೋಗಗಳು ಎಂದರು. ಬಸವಣ್ಣ ಕಾಯಕ, ಸಮಾಜತೆ, ಜಾತ್ಯಾತೀತತೆ ಬಹಳ ಮುಖ್ಯ ಎಂದರು. ಸಮಾಜ ಮುನ್ನಡೆಸಿವ ನಾಯಕರು ನಮ್ಮ ಯುವಜನತೆ ಆಗಬೇಕು ಎಂದರು.

ವಿಘ್ನಸಂತೋಷಿ(MES)ಗಳಿಗೆ ಡಿಸಿ ಜಯರಾಮ ಸಿಂಹಸ್ವಪ್ನ: ಗದಗಿನ ತೋಂಟದಾರ್ಯ ಶ್ರೀಗಳು ಮಾತನಾಡಿ ಜಿಲ್ಲಾಧಿಕಾರಿ ಎನ್. ಜಯರಾಮ ಉತ್ತಮ ಸಂಸ್ಕೃತಿಯ ನ್ನು ಬೆಳಗಾವಿಯಲ್ಲಿ ಬಿತ್ತಿದ್ದಾರೆ. ದೇಶದ ಭವಿಷ್ಯವಾದ ಮಕ್ಕಳನ್ನು ಉತ್ತೇಜಿತಗೊಳಿಸುವ ಕೆಲಸ ಡಿಸಿ ಮಾಡಿದ್ದಾರೆ. ದೇಶದ ಆಡಳಿತ ಅಧಿಕಾರಿಗಳ ಮೇಲಿದೆ. ದೇಶ ಅಂದರೆ ಮಣ್ಣಿನ ಗುಡ್ಡ ಅಲ್ಲ, ಅಲ್ಲಿ ವಾಸಿಸುವ ಜನ ಎಂದು ತಿಳಿಯಿರಿ. ಮನಸ್ಮೃತಿ ಎಂದರೆ ಭಯಾನಕವಾದದ್ದು, ಮೇಲ್ಜಾತಿಗೆ ಪ್ರಶಸ್ತ ಅಂದು ಪೂನಾದಲ್ಲಿ ಇತ್ತು. ಕೆಳಜಾತಿಯವರಿಗೆ ಅಲ್ಲಿ ಗೌರವವಿರಲಿಲ್ಲ. 174 ವರ್ಷದ ಹಿಂದೆ ಸಾವಿತ್ರಿಭಾಯಿ ಎಂಬ ಶೂದ್ರ ಮಹಿಳೆ ಶಾಲೆ ಪ್ರಾರಂಭಿಸಿದರು. ಶಿಕ್ಷಕಿಯಾಗಿ ಅಂದು ಸಮಾಜ ಸುಧಾರಿಸಿದಳು. ಜನೇವರಿ 3 ನ್ನು ಶಿಕ್ಷಕರ ದಿನಾಚರಣೆ ಮಾಡಿ ಹೊರತಾಗಿ ರಾಧಾಕೃಷ್ಣ ಅವರ ಹುಟ್ಟು ದಿನದಿಂದಲ್ಲ. ಸಾವಿತ್ರಿಭಾಯಿಗೆ ತೊಂದರೆ ಕೊಟ್ಟಿದ್ದ ಫಡ್ನವೀಸ್ ವಂಶದ ಮುಖ್ಯಮಂತ್ರಿ ಮಹಾರಾಷ್ಟ್ರ ಸಿಎಂ ತಮ್ಮ ಕೈಯಿಂದ ಇಂದು ಸಾವಿತ್ರಿಭಾಯಿ ವಿವಿ ತೆರೆಯುವ ಕಾಲ ಬಂತು ಎಂದು ಮಾರ್ಮಿಕವಾಗಿ ನುಡಿದರು.ಬೆಳಗಾವಿಯಲ್ಲಿ ವಿಘ್ನಸಂತೋಷಿಗಳು(ಎಂಇಎಸ್) ಹೆಡೆ ಎತ್ತದಂತೆ ಡಿಸಿ ಬಡಿದು ಕೆಡವಿದ್ದಾರೆ ಎಂದರು.