SHARE

ಬೆಳಗಾವಿ: ಪ್ರಾಚೀನ ಕಾಲದಿಂದಲೇ ಭಾರತ ದೇಶ ಯೋಗದಂಥ ಸಂಜೀವತ್ವದ ವಿಧ್ಯೆಯನ್ನು ಜಗತ್ತಿಗೆ ಪರಿಚಯಿಸಿದೆ ಎಂದು ಜಿಲ್ಲಾಧಿಕಾರಿ ಎನ್. ಜಯರಾಮ ಹೆಮ್ಮೆ ವ್ಯಕ್ತಪಡಿಸಿದರು. ನಗರದ ಗಾಂಧಿ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆಯುಷ ಇಲಾಖೆ ಸಹಯೋಗದಲ್ಲಿ ನಡೆದ ವಿಶ್ವ ಯೋಗಾ ದಿನದಲ್ಲಿ ಭಾಗವಹಿಸಿ ಮಾತನಾಡಿ ದೇಶದ ವಿವಿಧ ಕಾಲನುಕ್ರಮ ಮತ್ತು ಯುಗಗಳಲ್ಲಿ ಋಷಿಮುನಿಗಳು, ಯೋಗಿಗಳು, ಸಾಧು ಸಂತರು ಆರೋಗ್ಯ ವೃದ್ಧಿ ಮತ್ತು ತನುಮನ ಕಾಪಾಡಿಕೊಳ್ಳಲು ಯೋಗವನ್ನು ಜಗತ್ತಿಗೆ ಧಾರೆ ಎರೆದಿದ್ದಾರೆ ಎಂದರು.

ಸಂಸದ ಸುರೇಶ ಅಂಗಡಿ ಮಾತನಾಡಿ ಯೋಗದಲ್ಲಿ ದೇಶ ತನ್ನದೆಯಾದ ಕೊಡುಗೆ ನೀಡಿದೆ. ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಿದ ಶ್ರೇಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಯೋಗಕ್ಕೆ 5 ಸಾವಿರ ವರ್ಷಗಳ ಇತಿಹಾಸವಿದೆ. ವಿಶ್ವಮಟ್ಟದಲ್ಲಿ ಯೋಗವನ್ನು ಆಚರಿಸಲು ಪ್ರಧಾನಿ‌ ನರೇಂದ್ರ ಮೋದಿ ಅವರ ಪಾತ್ರ ಮಹತ್ವದಾಗಿದೆ ಎಂದರು. ಇದಕ್ಕೂ ಮುನ್ನ ಮುರುಳಿಧರ ಹಾಗೂ ತಂಡದವರಿಂದ ಸಾರ್ವಜನಿಕರಿಗೆ ಆಕರ್ಷಕ ಯೋಗಾಭ್ಯಾಸ ಪ್ರದರ್ಶನ ನಡೆಯಿತು.