SHARE

ಬೆಳಗಾವಿ: ನಗರದ 3ನೇ ಡಿಸಿಪಿಯಾಗಿ conferred IPS ಅಧಿಕಾರಿ ಸೀಮಾ ಲಾಟಕರ ಇಂದು ಕಮಿಷ್ನರ್ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಮಧ್ಯಾಹ್ನ 12 ಕ್ಕೆ ಆಗಮಿಸಿದ ಕಾನೂನು ವಿಭಾಗದ ಡಿಸಿಪಿ ಅವರಿಗೆ ಸಾಂಪ್ರದಾಯಿಕ ಇಲಾಖಾ ಆಹ್ವಾನ ನೀಡಿ ಕಿರಿಯ ಅಧಿಕಾರಿಗಳು ಬರಮಾಡಿಕೊಂಡರು. ನಂತರ ಸೀಮಾ ಲಾಟಕರ ಕಮಿಷ್ನರ್ ಕೃಷ್ಣಭಟ್ ಅವರಿಗೆ ವಂದನೆ ಸಲ್ಲಿಸಿ ಅಧಿಕಾರ ಸ್ವೀಕರಿಸಿದರು. ಕ್ರೈಂ ವಿಭಾಗದ ಡಿಸಿಪಿ ಅಮರನಾಥರೆಡ್ಡಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.