SHARE

ಬೆಳಗಾವಿ: ಸಂಚಾರ ಸುರಕ್ಷಾ ಹೆಸರಲ್ಲಿ ಜನರನ್ನು ಬೆದರಿಸಿ ಹಣ ಪೀಕುತ್ತಿದ್ದ ಇಬ್ಬರು ಎಎಸ್ಐಗಳನ್ನು ನಗರ ಪೊಲೀಸ್ ಆಯುಕ್ತರು ಅಮಾನತುಗೊಳಿಸಿ ಇಲಾಖಾ ತನಿಖೆಗೆ ಆದೇಶಿಸಿದ್ದಾರೆ. ನಿಯಮ‌ ಉಲ್ಲಂಘನೆ ಮಾಡುವ ವಾಹನ ಸವಾರರಿಗೆ ಸಂಚಾರಿ ಪೊಲೀಸರು ರಸೀದಿ‌ ಹರಿದು ದಂಡ ಕಟ್ಟಿಸಿಕೊಳ್ಳಬೇಕು. ಬದಲಾಗಿ ₹ 100 ಜೇಬಿಗೆ ಇಳಿಸಿಕೊ‌ಳ್ಳುತ್ತಿದ್ದ ಸಂಚಾರಿ‌ ಎಎಸ್ಐ ಯಾಸೀನ್ ಡೊಂಗರಕಿ ಹಾಗೂ ವಿನಾಯಕ ದಳವಾಯಿ ಅವರನ್ನು ಅಮಾನತ್ತು ಮಾಡಿ ಇಲಾಖಾ ತನಿಖೆಗೆ ನಗರ ಪೊಲೀಸ್ ಆಯುಕ್ತ ಟಿ.ಜೆ.ಕೃಷ್ಣಭಟ್ ಆದೇಶ ಹೊರಡಿಸಿದ್ದಾರೆ‌.

ನಗರದ ಹೃದಯ ಭಾಗದ ಬೋಗಾರವೇಸ್ ವೃತ್ತದ ನ್ಯೂಕ್ಲಿಯಸ್ ಮಾಲ್ ಬಳಿ ವಾಹನ ಸವಾರರಿಂದ ಸಂಚಾರ ನಿಯಮ ಉಲ್ಲಂಘನೆ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ಸಂಚಾರಿ ಎಎಸ್ಐಗಳಾದ ಯಾಸೀನ ಡೊಂಗರಕಿ ಹಾಗೂ‌ ವಿನಾಯಕ ದಳವಾಯಿ ಅಮಾನತ್ತಿಗೆ ಒಳಗಾದರೆ, ಓರ್ವ ಹೋಂ ಗಾರ್ಡನನ್ನು ಸೇವೆಯಿಂದ ವಜಾಗೊಳಿಸಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಪ್ರಕರಣದಲ್ಲಿ ಯಾಸಿನ್ ಡೊಂಗರಕಿ ಹಣ ಪೀಕುವ ಲಾಲಸೆ ಬುದ್ಧಿಗೆ ಕಿವಿಗೊಟ್ಟು ವಿನಾಯಕ ದಳವಾಯಿ ಕೆಟ್ಟ ಎಂದು ಮೂಲಗಳು ತಿಳಿಸಿವೆ.

ಹೋಂ ಗಾರ್ಡಗೆ ಅನ್ಯಾಯ: ಹೋಂ ಗಾರ್ಡ್ ಸಿಬ್ಬಂಧಿಯನ್ನು ಪೊಲೀಸರು, ಅಬಕಾರಿ ಸಿಬ್ಬಂಧಿ ನಡೆಸಿಕೊಳ್ಳುವ ಪರಿ ಸರಿ ಇರುವುದಿಲ್ಲ. ಪೊಲೀಸ್ ಪೆದೆಗಳು colleagues ತರಹ ಅವರನ್ನು ನಡೆಸಿಕೊಳ್ಳದೇ ತಮ್ಮ ಕೈಯಲ್ಲಿನ ಕೆಲಸಗಾರರಂತೆ ನೋಡಿಕೊಳ್ಳುತ್ತಾರೆ. ಪ್ರಕರಣದಲ್ಲಿ ಎಎಸ್ಐ ಆದೇಶದಂತೆ ನಡೆದುಕೊಂಡ ಹೋಂ ಗಾರ್ಡ್ ಕೆಲಸ ಕಳೆದುಕೊಂಡಿದ್ದಾನೆ. ಪೊಲೀಸರು ಹೇಳಿದಂತೆ ಕೆಲಸ ಮಾಡಬೇಕಾದ ಹೋಂ ಗಾರ್ಡನ ದುರಾದೃಷ್ಟವೇ ಸರಿ.