SHARE

ಬೆಳಗಾವಿ: ನಾನು ತಪ್ಪು ಮಾತಾಡಿದ್ದೇನೆ; ನನ್ನನ್ನು ಕ್ಷಮಿಸಿ ಬಿಡಿ ತಾತ ಎಂದು ತನ್ನ Hi profile ಅಜ್ಜ, ಮಾಜಿ ಪ್ರಧಾನಿಗೆ ಗೋಗರೆದು ಕ್ಷಮಾಪನೆ ಕೇಳಿದ್ದು; ರಾಜಕೀಯ ಹಸುಗೂಸು ಪ್ರಜ್ವಲ ರೇವಣ್ಣ. ಪಕ್ಷದಲ್ಲಿ ಪ್ರಾತಿನಿದ್ಯ ಪ್ರಾಮಾಣಿಕ ಕಾರ್ಯಕರ್ತರಿಗಿಲ್ಲ ಎಂದು ತನ್ನ ಅಜ್ಜ ಹಾಗೂ ಚಿಕ್ಕಪ್ಪನಿಗೆ ಟಾಂಗ್ ಕೊಡುವ ರೀತಿಯಲ್ಲಿ ಮಾತಾಡಿ ರಾಜ್ಯಾದ್ಯಂತ ಸುದ್ದಿ ಮಾಡಿದ್ದ ಪ್ರಜ್ವಲ ಈಗ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೆಗೌಡರ ಬಳಿ ಕ್ಷಮೆ ಕೇಳಿದ್ದು, ಒಂದೆರಡು ದಿನದಲ್ಲಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಬಳಿ ಸಹ ಕ್ಷಮೆ ಕೇಳಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜೆಡಿಎಸ್ ರಾಜ್ಯ ವಕ್ತಾರ, ಎಂಎಲ್ಸಿ ಟಿ. ಎ. ಶರವಣ, ಪ್ರಜ್ವಲ ರೇವಣ್ಣ ಅವರಿಗೆ ತಾವು ಮಾತಾಡಿದ ತಪ್ಪು ಅರಿವಾಗಿದೆ. ಯುವಕನ ಆವೇಷಭರಿತ ನುಡಿಗೆ ಪಕ್ಷ ಹೆಚ್ಚಿನ ಅರ್ಥ ಕಲ್ಪಿಸಿಕೊಳ್ಳದು. ರಾಷ್ಟ್ರೀಯ ಅಧ್ಯಕ್ಷ ದೇವೆಗೌಡರೊಂದಿಗೆ ಪ್ರಜ್ವಲ ಕನಿಷ್ಠ 2 ಗಂಟೆ ಚರ್ಚಿಸಿ ಕ್ಷಮಾಪಣೆ ಕೇಳಿದ್ದಾರೆ. ಪಕ್ಷ ನನ್ನನ್ನು ಕ್ಷಮಿಸಿ ಒಪ್ಪಿದರೆ ಮಾತ್ರ ರಾಜಕೀಯ ಮಾಡುತ್ತೇನೆ, ಇಲ್ಲವೆಂದರೆ ನನಗೆ ಬೇಡವೇ ಬೇಡ ಎಂದು ಪ್ರಜ್ವಲ ನಯವಾಗಿ ತಮ್ಮ ತಪ್ಪಿದ ಮಾತಿಗೆ ಪಶ್ಚಾತ್ತಾಪ ನುಡಿ ಹೇಳಿದ್ದಾರೆ ಎಂದರು.

ರಾಜಕೀಯ ಮಹಾಮುತ್ಸದ್ಧಿ, ರಾಜಕೀಯ ಚಿಂತನೆಯನ್ನೇ ಹೊತ್ತು, ಹೊದ್ದು ಮಲಗುವ ದೇವೆಗೌಡರು ತಮ್ಮ ಮೊಮ್ಮಗನಿಗೆ ಅತೀವ ತಾಳ್ಮೆ ಪ್ರೀತಿಯಿಂದ ರಾಜಕೀಯ ಪ್ರಬುದ್ಧತೆಯ ಪಾಠ ಮಾಡಿ, ಕೆಲ ನಿಮಿಷಗಳಲ್ಲಿ ಅವನನ್ನು ರಾಜಕೀಯ ಪಟು ಮಾಡಿದ್ದಾರೆ. ಕೂಡಲೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಕ್ಷಮಾಪನೆ ಕೇಳುವಂತೆ ದೇವೆಗೌಡರು ಮೊಮ್ಮಗನಿಗೆ ನೀಡಿದ ನಲುಮೆಯ ಸೂಚನೆಗೆ, ಪ್ರಜ್ವಲ ತಲೆದೂಗಿದ್ದು ಒಂದೆರಡು ದಿನದಲ್ಲಿ ಎಚ್ಡಿಕೆ ಭೇಟಿ ಸಾಧ್ಯತೆ ಇದೆ, ಕುಮಾರಣ್ಣನ ಬಳಿ ಪ್ರಜ್ವಲ ತಮ್ಮ ದುಡುಕಿನ ಸಾರ್ವಜನಿಕ ಹೇಳಿಕೆಗೆ ಅನಂತ ಕ್ಷಮಾಪನೆ ಸಹ ಕೇಳಲಿದ್ದಾರೆ ಎಂದು ಶರವಣ ಸ್ಪಷ್ಠಪಡಿಸಿದ್ದಾರೆ