SHARE

ಬೆಳಗಾವಿ: ವಾರದಲ್ಲಿ ಜಿಲ್ಲೆಯಲ್ಲಿ ನಡೆದ ಪತ್ರಕರ್ತರ ಮೇಲಿನ ಪೊಲೀಸ್ ದೌರ್ಜ್ಯನ್ಯದ ವಿರುದ್ಧ ಇಡೀ ಮಾಧ್ಯಮ ವಲಯ ಕೆರಳಿ ಇಂದು ಪೊಲೀಸ್ ಇಲಾಖೆಗೆ ತೀಕ್ಷ್ಣ ಎಚ್ಚರಿಕೆ ರವಾಣಿಸಿದೆ. ಖಾನಾಪುರ ತಾಲೂಕು ಬೆಕವಾಡ ಗ್ರಾಮದಲ್ಲಿ ವರದಿಗೆ ತೆರಳಿದ್ದ ತಾಲೂಕಾ ವರದಿಗಾರ ಪ್ರಸನ್ನ ಕುಲಕರ್ಣಿ ಮೇಲೆ ಸಾರ್ವಜನಿಕರ ಎದುರೇ ನಂದಗಡ ಪಿಎಸ್ ಐ ಎ.ಎಸ್. ಅವಟಿ ಮಾರಣಾಂತಿಕ ಹಲ್ಲೆ ನಡೆಸಿ ಠಾಣೆಗೆ ಹೊತ್ತೊಯ್ದಿದ್ದ ಪ್ರಕರಣ ಆರುವ ಮುಂಚೆಯೇ ನಿನ್ನೆ ಮಂಗಳವಾರ ಕ್ರೈಂ ವರದಿಗೆ ತೆರಳಿದ್ದ ಕನ್ನಡಮ್ಮ ಪತ್ರಿಕೆ ಜಿಲ್ಲಾ ವರದಿಗಾರ ಕಿರಣ ಪಾಟೀಲ ಅವರ ಮೇಲೆ ಮಾಳಮಾರುತಿ ಇನ್ಸಪೆಕ್ಟರ್ ಚನ್ನಕೇಶವ ಟಿಂಗರಿಕರ ಜಿಲ್ಲಾಸ್ಪತ್ರೆ ತುರ್ತು ನಿಗಾ ಘಟಕದ ಬಳಿ ಹಲ್ಲೆ ನಡೆಸಿ ಸಾರ್ವಜನಿಕವಾಗಿ ಕಪಾಳ ಮೋಕ್ಷ ಮಾಡಿದ್ದರು. ಕರ್ತವ್ಯನಿರತ ಪತ್ರಕರ್ತರ ಮೇಲಿನ ಹಲ್ಲೆಗೆ ಇಂದು ಬೆಳಗಾವಿ ಜಿಲ್ಲಾ ಮಾಧ್ಯಮ ವಲಯ ತೀವೃ ಖೇದ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದು ಆದ ಪ್ರಮಾದ ತತಕ್ಷಣ ಸರಿಪಡಿಸಿಕೊಳ್ಳದಿದ್ದರೆ ಪರಿಣಾಮ ದೂರ ಹೋದಿತು ಎಂಬ ಎಚ್ಚರಿಕೆ ನೀಡಲಾಗಿದೆ. ಡಿಸಿಪಿ ಅಮರನಾಥರೆಡ್ಡಿ ಇನ್ಸಪೆಕ್ಟರ್ ಮಾಡಿದ ಹಲ್ಲೆ ಬಗ್ಗೆ ಖೇದ ವ್ಯಕ್ತಪಡಿಸಿದ್ದು, ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತದೆ. ಎಸಿಪಿ ಒಬ್ಬರನ್ನು ತನಿಖೆಗೆ ನೇಮಿಸಲಾಗುವುದು ಎಂದು ಮಾಧ್ಯಮ ಮುಖಂಡರಿಗೆ ಭರವಸೆ ನೀಡಿದ್ದಾರೆ. ವಾರದಲ್ಲಿ ತಪ್ಪಿತಸ್ಥ ಅಧಿಕಾರಿ ಮೇಲೆ ಕಠಿಣ ಕ್ರಮ ಜರುಗಿಸದಿದ್ದರೆ ಮಾಧ್ಯಮಗಳು ಅಸಹಕಾರ ಧೋರಣೆ ತಳೆಯಬೇಕಾದಿತು. ಮಾಧ್ಯಮದ ಸಹಕಾರಕ್ಕೆ ಪ್ರತಿಯಾಗಿ, ಪೊಲೀಸ್ ಇಲಾಖೆಯ ಅಸಹಕಾರ ಹೆಚ್ಚಾಗಿದೆ ಎಂದು ಮಾಧ್ಯಮ ಮುಖಂಡರು ಅಸಮಧಾನ ವ್ಯಕ್ತಪಡಿಸಿದರು.

ನಂದಗಡದಲ್ಲಿ ಪತ್ರಕರ್ತ ಪ್ರಸನ್ನ ಕುಲಕರ್ಣಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಎಸ್ಪಿ ಡಾ. ರವಿಕಾಂತೇಗೌಡ ಅವರಿಗೆ ಪತ್ರಕರ್ತ ಮುಖಂಡರು ಕಠಿಣ ಕ್ರಮಕ್ಕೆ ಒತ್ತಾಯಿಸಿದರು. ನಂದಗಡ ಪಿಎಸ್ ಐ ವರ್ತನೆ immatures ಎಂದು ಸ್ವತಃ ಎಸ್ಪಿ ಗೌಡರು ಖೇದ ವ್ಯಕ್ತಪಡಿಸಿದ್ದು, ಘಟನೆ ನಡೆದ ಕೂಡಲೇ ಪಿಎಸ್ ಐ ಅವಟಿಯನ್ನು ವೈರಲೆಸ್ ವಿಭಾಗಕ್ಕೆ ಶಿಫ್ಟ್ಮಾ ಡಲಾಗಿದೆ. ಪತ್ರಕರ್ತನ ಮೇಲಿನ ಅಮಾನುಷ ಹಲ್ಲೆ ಪ್ರಕರಣವನ್ನು ಡಿಎಸ್ಪಿ ಒಬ್ಬರಿಗೆ ತನಿಖೆಗೆ ಒಪ್ಪಿಸಲಾಗುವುದು. ಉತ್ತರ ವಲಯ ಐಜಿಪಿ ಡಾ. ಕೆ. ರಾಮಚಂದ್ರರಾವ್ಅ ವರೊಂದಿಗೆ ಚರ್ಚಿಸಿ ತಪ್ಪಿತಸ್ಥ ಪಿಎಸ್ ಐ ಮೇಲೆ ಕಠಿಣ ಕ್ರಮ ಜರುಗಿಸುವುದಾಗಿ ಎಸ್ಪಿ ಸ್ಪಷ್ಠ ಭರವಸೆ ನೀಡಿದ್ದಾರೆ. ಎರಡೂ ಪ್ರಕರಣದಲ್ಲಿ ಎಸ್ಪಿ ಡಾ. ರವಿಕಾಂತೇಗೌಡರು ಮತ್ತು ಡಿಸಿಪಿ ಅಮರನಾಥರೆಡ್ಡಿ ತನಿಖೆಗೆ ವಹಿಸಿ, ಇಲಾಖಾ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದ್ದು ಮುಂದುವರೆಯುವ ಬೆಳವಣಿಗೆ ಕಾಯ್ದು ನೋಡಬೇಕಿದೆ.

ಹಿರಿಯ ಪತ್ರಕರ್ತರಾದ ಡಾ. ಸರಜೂ ಕಾಟಕರ, ಎಂ.ಕೆ. ಹೆಗಡೆ, ವಿವೇಕ ಮಹಾಲೆ, ಸುಭಾಷ ಕುಲಕರ್ಣಿ, ವಿಲಾಸ ಜೋಶಿ, ದಿಲೀಪ ಕುರಂದವಾಡೆ, ರಾಜಶೇಖರ ಪಾಟೀಲ, ರಾಜು ಗವಳಿ, ಕೀರ್ತಿಶೇಖರ ಕಾಸರಗೋಡ, ಶಿವಾನಂದ ಚಿಕ್ಕಮಠ, ನೌಶಾದ ಬಿಜಾಪುರ, ಡಿ. ಕೆ. ಪಾಟೀಲ, ಶ್ರೀಶೈಲ ಮಠದ, ಶಿವಾನಂದ ಚಿಕ್ಕಮಠ, ಆರ್. ಎಸ್. ದರ್ಗೆ, ಮಹೇಶ ವಿಜಾಪುರ, ಸುರೇಶ ನೇರ್ಲಿ, ಸುನಿತಾ ದೇಸಾಯಿ, ಸಂಜಯ ಸೂರ್ಯವಂಶಿ, ಬಹದ್ದೂರ ದೇಸಾಯಿ, ರಾಜು ಹಿರೇಮಠ, ಮಂಜುನಾಥ ಕೋಳಿಗುಡ್ಡ, ಸತೀಶ ಪಾಗಾದ, ಜಿ. ಪುರುಷೋತ್ತಮ, ಸುನೀಲ ಪಾಟೀಲ, ಜಗದೀಶ ವೀರಕ್ತಮಠ, ರವಿ ಚೌಗುಲೆ, ಕುಂತಿನಾಥ ಕಲ್ಮಣಿ, ಭರಮಗೌಡ ಪಾಟೀಲ, ಬಾಳಗೌಡ ಪಾಟೀಲ, ಅರುಣ ಯಳ್ಳೂರಕರ, ಮಾಲ್ತೇಶ, ಮಾಲ್ತೇಶ ಹೂಲಿ, ರಾಜು ಸದರೆ, ಜಿತೇಂದ್ರ ಕಾಂಬಳೆ, ಸತೀಶ ಬ್ಯಾಳಿ, ಏಕನಾಥ ಅಗಸಿಮನಿ, ಇಮಾಮಹುಸೇನ ಗುಡೆನ್ನವರ, ವಿಶ್ವನಾಥ ದೇಸಾಯಿ ಸೇರಿದಂತೆ ಎಲ್ಲ ಪತ್ರಕರ್ತರು ಭಾಗವಹಿಸಿದ್ದರು. ಪೊಲೀಸ್ ಅಧಿಕಾರಿಗಳಿಗೆ ಮನವಿ ಕೊಡುವ ಮುಂಚೆ ಕನ್ನಡ ಸಾಹಿತ್ಯ ಭವನದಲ್ಲಿ ಪತ್ರಕರ್ತರ ಸಭೆ ನಡೆಯಿತು.