SHARE

ಬೆಳಗಾವಿ: ಮಹಾರಾಷ್ಟ್ರದ ಶಿರೋಳ ಠಾಣೆಯ ಪೆದೆಯೊಬ್ಬರ ಮಗನನ್ನು ಚಿಕ್ಕೋಡಿ ತಾಲೂಕು ಹಣಬರವಾಡಿ ಬಳಿ ಕೊಚ್ಚಿ ಕೊಲೆ ಮಾಡಲಾಗಿದೆ. ಶಾರುಕ್ ಬೋಜಗರ (೨೧) ಕೊಲೆಯಾದವನು. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಣಬರವಾಡಿ ಗ್ರಾಮದ ಬಳಿ ಘಟನೆ ನಡೆದಿದೆ. ಬೈಕ್ ಮೇಲೆ ಹೋಗುವಾಗ ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಕೊಲೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ಥಳಕ್ಕೆ ನಿಪ್ಪಾಣಿ ಗ್ರಾಮಾಂತರ ಪೋಲಿಸರ ಭೇಟಿ ನೀಡಿ ಪರಿಶಿಲನೆ ನಡೆಸಿದರು.