SHARE

ಬೆಳಗಾವಿ: ಅಕ್ರಮವಾಗಿ ಜಿಂಕೆ(ಸಾಂಬಾರ) ಕೊಂಬು ಸಾಗಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಅರಣ್ಯಾಧಿಕಾರಿಗಳು ಸಂಜೆ ಶಿವ ಬಸವನಗರದ ರಕ್ಷಿತಾ ಹೊಟೆಲ್ ಬಳಿ ವಶಕ್ಕೆ ಪಡೆದಿದ್ದಾರೆ. ಹುಕ್ಕೇರಿ ತಾಲೂಕು ಶಹಾಬಂದರ ಗ್ರಾಮದ ನಿವಾಸಿ ಮೆಹಬೂಬ ಶೇಖ್ ನದಾಫ್(42) ಬಂಧಿತ ಆರೋಪಿತ. ಒಟ್ಟು ನಾಲ್ಕು ಕೊಂಬುಗಳನ್ನು ವಶಕ್ಕೆ ಪಡೆಯಲಾಗಿದೆ. ಸಾರ್ವಜನಿಕರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

ವಣ್ಯಜೀವಿ ಕಾಯ್ದೆ 1972 ರ ಅಡಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಾರಂಭಿಸಲಾಗಿದೆ. 2 ನೇ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಅರಣ್ಯಾಧಿಕಾರಿಗಳು ಹಾಜರುಪಡಿಸಿದ್ದು, 15 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎಸಿಎಫ್ ಶಿನಾನಂದ ನಾಯಿಕವಾಡಿ, RFO ಶ್ರೀನಾಥ ಕಡೋಲಕರ, DRFO ರಮೇಶ ಗಿರಿಯಪ್ಪನವರ, ಫಾರೆಸ್ಟರ್ ಚಿಗರಿ ಮತ್ತು ಸಿಬ್ಬಂಧಿ ಭಾಗವಹಿಸಿದ್ದರು.