SHARE

ಬೆಳಗಾವಿ: ಪೊಲೀಸ್ ಶೌರ್ಯ, ಸಾಹಸ ಮತ್ತು ಗಟ್ಟಿತನ ಪ್ರದರ್ಶನದ ಅಂಗವಾಗಿ ಇಲಾಖೆಯ ನೌಕರರಲ್ಲಿ ಆತ್ಮ ಸ್ಥೈರ್ಯ ಮತ್ತು ಚಟುವಟಿಕೆ ಉಕ್ಕಿಸುವ ಅಂಗವಾಗಿ ಕೆಎಸ್ ಆರ್ ಪಿ ಕರ್ನಾಟಕ ದರ್ಶನ ಸೈಕಲ್ ರ್ಯಾಲಿ ಎಡಿಜಿಪಿ ಭಾಸ್ಕರರಾವ ನೇತ್ರತ್ವದಲ್ಲಿ ಪ್ರಾರಂಭಿಸಿದೆ.

ಶುಕ್ರವಾರ ಬೆಳಿಗ್ಗೆ 5:45 ಕ್ಕೆ ವಿಜಯಪುರದಿಂದ ಹೊರಟ ಎಡಿಜಿಪಿ ಭಾಸ್ಕರರಾವ ನೇತೃತ್ವದ ಸೈಕಲ್ ಸವಾರ ಪೊಲೀಸರ ತಂಡ ಸುದೀರ್ಘ 220 ಕಿಮೀ ಕ್ರಮಿಸಿದ ನಂತರ ರಾತ್ರಿ 9:30 ಕ್ಕೆ ಬೆಳಗಾವಿ ಚನ್ನಮ್ಮ ವೃತ್ತದಲ್ಲಿ ಸೇರಿಬಂದಾಗ ಅದ್ಧೂರಿ ಸ್ವಾಗತ ಕೋರಲಾಯಿತು. ಉತ್ತರ ವಲಯ ಐಜಿಪಿ ಡಾ. ರಾಮಚಂದ್ರರಾವ, ಕನ್ನಡ ಹೋರಾಟಗಾರ ಅಶೋಕ ಚಂದರಗಿ, ಕೆಎಸ್ ಆರ್ ಪಿ ಕಮಾಂಡಂಟ್ ಜಗದೀಶ ತರಕಾರ, ಡಿಸಿಪಿ ಅಮರನಾಥರೆಡ್ಡಿ, ಸೀಮಾ ಲಾಟಕರ ಹಾಗೂ ಸಮಸ್ತ ನಾಗರಿಕ ಹಾಗೂ ಸಶಸ್ತ್ರ ಪಡೆಗಳ ಸಿಬ್ಬಂಧಿ ಹಾರ ಹಾಕಿ ಬರಮಾಡಿಕೊಂಡರೆ, ಹೆಣ್ಣುಮಕ್ಕಳು ಆರತಿ ಬೆಳಗಿ, ಡೊಳ್ಳು ಬಾರಿಸಿ ಸೈಕಲ್ ಸವಾರ ತಂಡವನ್ನು ಬರಮಾಡಿಕೊಂಡರು. ನಂತರ ಎಡಿಜಿಪಿ ಭಾಸ್ಕರರಾವ್ ಚನ್ನಮ್ಮ ಪುತ್ಥಳಿಗೆ ಮಾಲಾರ್ಪನೆ ಮಾಡಿ ಸಂತಸ ವ್ಯಕ್ತಪಡಿಸಿದರು. ರಾಜ್ಯದ ವಿವಿಧ ಜಿಲ್ಲೆಗಳ ಘಾಟ್ ಸೆಕ್ಷೆನ್ ಮೂಲಕ ಸೈಕಲ್ ಸವಾರಿ ಹೊರಟು 1576 ಕಿಮೀ ಕ್ರಮಿಸಿ ಅಂತಿಮವಾಗಿ ಜು.25 ಕ್ಕೆ ವಿಧಾನಸೌಧ ತಲುಪುವುದಾಗಿ ಭಾಸ್ಕರರಾವ ತಿಳಿಸಿದರು. ಇಂದಿಗೆ ತಂಡ ಸುಮಾರು 500 ಕಿಮೀ ಕ್ರಮಿಸಿದರು. ಬೀದರ್ ನಿಂದ ಗುಲಬರ್ಗಾ, ಗುಲಬರ್ಗಾದಿಂದ ವಿಜಯಜಾಪುರ ಹಾಗೂ ವಿಜಯಪುರದಿಂದ ಬೆಳಗಾವಿಗೆ ಇಂದು ಆಗಮಿಸಿದ ತಂಡ ಶನಿವಾರ ವಿಶ್ರಾಂತಿ ಪಡೆಯಲಿದೆ. ಶನಿವಾರ ಮತ್ತೆ ಗದಗನತ್ತ ಪ್ರಯಾಣಿಸಲಿದ್ದು ಒಂದೇ ದಿನದಲ್ಲಿ ಗದಗ ತಲುಪಲಿದ್ದಾರೆ. ಐಆರ್ ಬಿ, ಕೆಎಸ್ ಆರ್ಪಿಯ ಎಲ್ಲ ಬಟಾಲಿಯನ್ ಗಳ ಪೊಲೀಸ್ ಸಿಬ್ಬಂಧಿ ಸೈಕಲ್ ಸವಾರಿಯಲ್ಲಿ ತೊಡಗಿದ್ದಾರೆ. ಪೊಲೀಸ್ ನೌಕರಿಗೆ ಗುಡ್ ಬಾಯ್ ಹೇಳುವುದು, ಖಿನ್ನತೆ, ಆತ್ಮಹತ್ಯೆ, ಇಲಾಖೆಯಲ್ಲಿ ಸಹಜತೆಯಿಂದ ಇರಲು ವ್ಯಥೆ ಪಡುವ ಸಿಬ್ಬಂಧಿಗಳಿಗೆ ಮನೋಬಲ ತುಂಬಿ ಪೊಲೀಸ್ ಫೋರ್ಸ್ ಬಲಪಡಿಸುವುದೇ ನಮ್ಮ ಗುರಿ ಎಂದು ಸೈಕಲ್ ಸವಾರರು ತಿಳಿಸಿದರು. ಪೊಲೀಸರು ತಮ್ಮ ಎಲ್ಲ ಸಮಸ್ಯೆಗಳಿಗೆ ಮಾನಸಿಕವಾಗಿ ಗಟ್ಟಿಗೊಂಡು ಇಲಾಖೆ ಸೇವೆ ಮಾಡಬೇಕೆಂಬುವುದೇ ಸೈಕಲ್ ಸವಾರಿಯ ಉದ್ದೇಶಗಳಲ್ಲೊಂದು. ಬೆಳಗಾವಿ ಕನ್ನಡ ಸಂಘಟನೆಗಳು, ಜನಪರ ಸಂಘಟನೆಗಳು, ಪತ್ರಕರ್ತರು ಬರಮಾಡಿಕೊಂಡರು.