SHARE

ಬೆಳಗಾವಿ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಕ್ರಮಗಳ ಬಗ್ಗೆ ವರದಿ ನೀಡಿದ್ದ ಐಪಿಎಸ್ ಅಧಿಕಾರಿ ಡಿಐಜಿ ಡಿ. ರೂಪಾ ಪ್ರಕರಣ ಎತ್ತೆತ್ತಲೋ ಸಾಗುತ್ತಿದ್ದು, ಪ್ರಕರಣದಲ್ಲಿ ಡಿಐಜಿಗೆ ಮಾಹಿತಿ ನೀಡಿದ್ದ ಮೂವರು ಕೈದಿಗಳನ್ನು ಹಿಂಡಲಗಾಕ್ಕೆ ವರ್ಗಾಯಿಸಲಾಗಿದೆ. ಡಿ. ರೂಪಾ ಸರಕಾರಕ್ಕೆ ಪರಿಣಾಮಕಾರಿ ಮಾಹಿತಿ ನೀಡುವಲ್ಲಿ ಕೆಲ ಕೈದಿಗಳು ನೀಡಿದ್ದ ಮಾಹಿತಿಗಳೇ ಆಧಾರ ಎಂದು ಹೇಳಲಾಗಿದೆ.

ಬೆಂಗಳೂರಿನ ಪರಪ್ಪ ಅಗ್ರಹಾರದಲ್ಲಿ ಕೈದಿಗಳ ಮಧ್ಯೆ ತಾರತಮ್ಯ‌ ನಡೆದಿದೆ ಎಂದು ಡಿಐಜಿ ಡಿ.ರೂಪಾ ಅವರಿಗೆ ಕೆಲ ಕೈದಿಗಳು‌ ಮಾಹಿತಿ ನೀಡಿದ್ದರು. ಈ ಹಿನ್ನಲೆಯಲ್ಲಿ ಬೆಂಗಳೂರಿನ ಪರಪ್ಪ ಅಗ್ರಹಾರದಲ್ಲಿದ್ದ ಸುಮಾರು 41 ಕ್ಕೂ ಹೆಚ್ಚು ಕೈದಿಗಳನ್ನು ರಾಜ್ಯದಲ್ಲಿರುವ ಬೇರೆ ಬೇರೆ ಜಿಲ್ಲೆಗಳ ಕಾರಾಗೃಹದಲ್ಲಿ ರವಾನಿಸಲಾಗಿದೆ. ಅದರಂತೆ ಬೆಳಗಾವಿಯ ಹಿಂಡಲಗಾ ಕಾರಾಗೃಹಕ್ಕೆ ಅನಂತಮೂರ್ತಿ, ಬಾಬು ಹಾಗೂ ಲಾಂಗ್ ಬಾಬು ಎಂಬ ಮೂವರು ಕೈದಿಗಳನ್ನು ಸ್ಥಳಾಂತರ ಮಾಡಿದ್ದಾರೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧಿಖಾನೆ ಡಿಜಿಪಿ ಸತ್ಯನಾರಾಯಣ ಹಾಗೂ ಡಿಜಿಪಿ ಡಿ. ರೂಪಾ ಅವರ ನಡುವೆ ವಾಗ್ವಾದ ನಡೆಯುತ್ತಿದೆ. ಡಿಜಿಪಿ ಸತ್ಯನಾರಾಯಣ ಮೂರ್ತಿ ಅಣ್ಣಾ ಡಿಎಂಕೆ ಪಕ್ಷದ ಶಶಿಕಲಾ‌ ಅವರಿಂದ ಎರಡು ಕೋಟಿ ಹಣ ಪಡೆದು ಜೈಲಿನಲ್ಲಿ ಐಶಾರಾಮಿ ಜೀವನ‌ ನಡೆಸಲು ಬಿಟ್ಟಿದ್ದಾರೆ. ಅಲ್ಲದೆ ಕಾರಾಗೃಹದಲ್ಲಿರುವ ಶ್ರೀಮಂತ ಹಿನ್ನಲೆಯ ಕೈದಿಗಳಿಗೆ ರಾಜ ಮರ್ಯಾದೆ ನೀಡುತ್ತಾರೆ. ಕೆಲ ಕೈದಿಗಳನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. ಇಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂಬ ಮಾಹಿತಿ‌ ಕುರಿತು ವಿವಾದ ನಡೆದಿದೆ. ಬೆಂಗಳೂರಿನ ಕೇಂದ್ರ ಕಾರಾಗೃಹದಿಂದ 41 ಕೈದಿಗಳನ್ನು ಬೇರೆ ಬೇರೆ ಕಾರಾಗೃಹಗಳಿಗೆ ರವಾನಿಸಿದ್ದಾರೆ. ಅದರಂತೆ ಮೂವರು ಕೈದಿಗಳನ್ನು ಬೆಳಗಾವಿ ಹಿಂಡಲಗಾ ಕಾರಾಗೃಹಕ್ಜೆ ರವಾಣಿಸಿದ ಮಾಹಿತಿ ಲಭ್ಯವಾಗಿದೆ.