SHARE

By:ಕಾಶೀಮ ಹಟ್ಟಿಹೋಳಿ

ಖಾನಾಪುರ: ತಾಲೂಕಿನ ರೈತಾಪಿ ವರ್ಗದ ಜನರು ದಿನ ಬೆಳಕಾಗುತ್ತಿದ್ದಂತೆ ಮಳೆ ಇಲ್ಲ, ಮತ್ತೆ ಬರಗಾಲ ಎಂದು ಒಬ್ಬರಿಗೊಬ್ಬರು ಮಾತನಾಡುತ್ತಿದ್ದರು ಇವರ ನೋವನ್ನು ಆ ಭಗವಂತನಿಗೂ ನೋಡಲಿಕ್ಕ ಆಗಲಿಲ್ಲ ಅದಕ್ಕಾಗಿಯೇ ಇವರ ಪರಿಸ್ಥಿತಿಯನ್ನು ಅರಿತು ತಾಲೂಕಿನ ಪಶ್ಚಿಮ ಭಾಗದ ಅರಣ್ಯ ಪ್ರದೇಶಗಳಾದ ಕಣಕುಂಬಿ, ಅಮಗಾಂವ, ಚಿಕಲಾ, ಸಡಾ, ಚುಗಳೆ, ಮಾನ ಅರಣ್ಯ ಪ್ರದೇಶಗಳಲ್ಲಿ 4 ದಿನಗಳಿಂದ ಹಾಗೂ ಪೂರ್ವಭಾಗದ ಲಿಂಗನಮಠ, ಕಕ್ಕೆರಿ, ಬೀಡಿ, ಬೂರಣಕಿ. ಗಂದಿಗವಾಡ, ಪಾರಿಶ್ವಾಡ, ಇಟಗಿ ಭಾಗಗಳಲ್ಲಿ 2 ದಿನಗಳಿಂದ ಉತ್ತಮ ಮಳೆ ಆಗುತ್ತಿದೆ.

ಖಾನಾಪುರ ತಾಲೂಕಿನ ಇತಿಹಾಸದಲ್ಲಿ ಕಳೆದ 3 ತಿಂಗಳ ಅವಧಿಯಲ್ಲಿ ಮಂಗಳವಾರ ದಿನದಂದು ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದೆ. ತಾಲೂಕಿನ ಪಶ್ಚಿಮ ಭಾಗದಲ್ಲಿ 180-225 ಮಿ.ಮಿ ಮಳೆಯಾದರೇ ಪೂರ್ವ ಭಾಗಕ್ಕೆ 60-100 ಮಿ.ಮಿ ಮಳೆಯಾಗಿದೆ. ಖಾನಾಪುರ ತಾಲೂಕಿನಲ್ಲಿ ಕಳೆದ 3 ತಿಂಗಳ ಅವಧಿಯಲ್ಲಿ ಉತ್ತಮ ಮಳೆಯಿಂದ ತಾಲೂಕಿನ ಹಲವಡೆ ಸೇತುವೆ ಹಾಗೂ ಭತ್ತದ ಗದ್ದೆಗಳಲ್ಲಿ ನೀರು ತುಂಬಿದೆ. ಇದರಿಂದ ಹಲವೆಡೆ ಸೇತುವೆಗಳು ಭೂ ಕುಸಿತಗೊಂಡು ಹರಿಯುವ ನೀರಿನ ರಭಸಕ್ಕೆ ಕೊಚ್ಚಿಹೋಗಿವೆ. ಇದರ ಜೊತೆಗೆ ಹಲವೆಡೆ ರಸ್ತೆ ಹದಿಗೆಟ್ಟಿದ್ದು, ಸೇತುವೆ ನಿರ್ಮಾಣ ಸಣ್ಣದಾಗಿರುವದರಿಂದ ಸೇತುವೆ ಮೇಲಿಂದ ನೀರು ಹರಿಯುತ್ತಿದ್ದು, ದಿನನಿತ್ಯ ಪ್ರಯಾಣಿಸುವರಿಗೆ ರಸ್ತೆ ಸಂಚಾರ ಅಡ್ಡಿಯನ್ನುಂಟುಮಾಡಿದೆ. ಸೋಮವಾರ ದಿನದಂದ್ದು ಸುರಿದ ಧಾರಕಾರ ಮಳೆಯಿಂದ ಕಣಕುಂಬಿ ಗ್ರಾಮದ ಮಾವಲಿ ದೇವಸ್ಥಾನದ ಹತ್ತಿರ ಭೂಕುಸಿತ ಆಗಿದೆ. ಇದರಿಂದಾಗಿ ಕಣಕುಂಬಿ ಹಾಗೂ ಚುಗಳೆ ಗಾಮಕ್ಕೆ ಸಂಪರ್ಕಕಲ್ಪಿಸುವ ರಸ್ತೆ ಕಡಿತಗೊಂಡಿದೆ. ಇದು ಖಾನಾಪುರ ಹಾಗೂ ಬೆಳಗಾವಿ ಪಟ್ಟಣಕ್ಕೆ ಸಂಪರ್ಕಕಲ್ಪಿಸುವ ಏಕಮಯ ರಸ್ತೆಯಾಗಿರುವುದರಿಂದ ಜನರು ಹಾಗೂ ವಿಧ್ಯಾರ್ಥಿಗಳು ಪರದಾಡುವಂತಾಗದೆ. ಈ ಭೂಕುಸಿತ ಆಗಲು ಕಾರಣ ಕಳೆದ ಕೆಲವು ವರ್ಷ ಕಳಸಾ ನಾಲಾ ಕಾಮಗಾರಿಯನ್ನು ಕೈಗೊಳ್ಳಲಾಗಿತ್ತು. ಸಮರ್ಪಕವಾದ ನಾಲಾ ರಸ್ತೆಯ ಕಾಮಗಾರಿ ಆಗದೆ ಇರುವುದರಿಂದ ಸರಕುಗಳನ್ನು ಬುಲೆರೊ ಗೂಡ್ಸ ವಾಹನದಲ್ಲಿ ಚುಗಳೆ ಗ್ರಾಮಕ್ಕೆ ತಲುಪಿಸಲು ಹೋಗುತ್ತಿರುವುವಾಗ ಭೂಕುಸಿತಗೊಂಡು ವಾಹನ ಕೇಳಗೆ ಬಿದ್ದು ಅಪಘಾತ ಉಂಟಾಗಿದೆ. ಈ ಅವಘಡದಿಂದ ವಾಹನ ಚಾಲಕನು ಗಂಭಿರಗಾಯಗೊಂಡಿದ್ದಾನೆ ಎಂದು ಮಾಹಿತಿ ತಡವಾಗಿ ಬೆಳಕು ಬಂದಿದೆ.

ಇದೇ ರೀತಿ ಪಶ್ಚಿಮ ಭಾಗದ ಅಸೋಗಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯು ಚಿಕ್ಕದಾಗಿರುದರಿಂದ ನೀರಿನ ಪ್ರಮಾಣ ಸೇತುವೆ ಮೇಲೆ ಹೆಚ್ಚಾಗಿ ಕಂಡು ಬರುತ್ತಿದೆ. ಇದರೊಂದಿಗೆ ಸಣ್ಣ ನೀರಾವರಿ ಇಲಾಖೆಯಿಂದ ಅಸೋಗಾ ಗ್ರಾಮದಲ್ಲಿ ಮಲಪ್ರಬಾ ನದಿಗೆ ಅಡ್ಡಲಾಗಿ ಬಾಂದಾರ ಕಮ್ ಸೇತುವೆ ನಿರ್ಮಾಣ ಮಾಡಲಾಗಿದೆ. ಈ ನಿರ್ಮಿಸಿದ ಸೇತುವೆಯು ಅಸೋಗಾ, ಬೋಸಗಾಳಿ, ಮಂತುರ್ಗಾ, ಹಾಗೂ ಕುಟಿನೋ ನಗರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಕಳೆದ ನಾಲ್ಕು ದಿನಗಳಿಂದ ಸುರಿದ ರಭಸವಾದ ಮಳೆಯಿಂದ ಮಲಪ್ರಬಾ ನದಿಗೆ ನಿರ್ಮಿಸಲಾದ ಬಲಭಾಗದ ತಡೆಗೋಡೆ ಒಡೆದು ಭರಮಾ ಜೋಸಿಲಕರ ಎಂಬುವರ ಅರ್ದ ಎಕರೆಯ ಹೂಲದಲ್ಲಿರುವ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿ ಅಪಾರ ನಷ್ಟ ಉಂಟಾಗಿದೆ. ಈ ಸೇತುವೆಯಲ್ಲಿ ಹೊಳು ಎತ್ತದೆಯೇ ಇರದ ಕಾರಣ ಸೇತುವೆಯಲ್ಲಿ ಅನೇಕ ಕಟ್ಟಿಗೆಯ ತುಂಡುಗಳು ಹಾಗೂ ಮಣ್ಣು ಸಂಗ್ರಹಣೆಗೊಂಡು ನೀರು ಮುಂದೆ ಸಾಗದೆ ಮಲಪ್ರಬಾ ನದಿಯ ಬಲಭಾಗ ಹಾಗೂ ಎಡಭಾಗದ ಭತ್ತದ ಗದ್ದೆಗಳಿಗೆ ನುಗ್ಗಿ ಬೆಳೆ ಹಾನಿಯಾಗಿ ರೈತರಿಗೆ ಪ್ರತಿವರ್ಷ ಅಪಾರ ಪ್ರಮಾಣದ ನಷ್ಟ ಉಂಟಾಗುತ್ತದೆ. ಕಳೆದ ವರ್ಷವು ಮಳೆಗಾಳದಲ್ಲಿ ಮಳೆಯಾದ ಕಾರಣ ತಡೆಗೋಡೆ ಒಡೆದು ಇದೆ ರೀತಿಯಾದ ಸಮಸ್ಯ ಉಂಟಾಗಿತ್ತು. ಆ ಸಮಸ್ಯೆಯನ್ನು ಪರಿಹರಿಸಲು ಅಸೋಗಾ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಬೆಳಗಾವಿಯ ಸಣ್ಣ ನೀರಾವರಿಯ ಇಲಾಖೆಯ ಇಂಜಿನಿಯರಿಗೆ ಮನವಿಯನ್ನು ಸಲ್ಲಿಸಿದರು ಯಾವುದೆ ಕ್ರಮ ಕೈಗೊಂಡಿಲ್ಲ ಇನ್ನಾದರು ಸಂಬಂದಿಸಿದ ಇಲಾಖೆ ಎಚ್ಚತ್ತುಕೊಂಡು ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಹಾಗೂ ನ್ಯಾಯವಾದಿ ಚೇತನ ಮನೇರಿಕರ ಆಗ್ರಹಿಸಿದ್ದಾರೆ.

ಇದೆ ಪ್ರಕಾರ ಪೂರ್ವಭಾಗದಲ್ಲಿ ಮಂಗಳವಾರ ದಿನದಂದು ಸುರಿದ ಧಾರಕಾರ ಮಳೆಗೆ ಕಳಪೆ ಕಾಮಗಾರಿಯಿಂದಾದ ಸೇತುವೆ ಕೊಚ್ಚಿಹೋಗಿರುವದರಿಂದ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಇದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗೋಲಿಹಳ್ಳಿಯಿಂದ ಬೀಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿ ಹೋಗಿದೆ. ಕಳೆದ ಎರಡು ದಿನಗಳಿಂದ ಸತತವಾಗಿ ಸುರಿದ ರಭಸವಾದ ಮಳೆಯಿಂದ ಕೇವಲ 6 ತಿಂಗಳಗಳ ಹಿಂದೆ ನಿರ್ಮಾಣವಾದ ಈ ಸೇತುವೆ ಕಳಪೆ ಕಾಮಗಾರಿಯಿಂದ ಕೊಚ್ಚಿಹೋಗಿ ಗೋಲಿಹಳ್ಳಿ ಬೀಡಿ ಗ್ರಾಮಕ್ಕೆ ಸಂಪರ್ಕ ಕಡಿತಗೊಂಡು ಜನರು ಪರದಾಡುವಂತಾಗಿದೆ. ಈ ಸೇತುವೆಯನ್ನು ಕಳೆದ 6 ತಿಂಗಳಗಳ ಹಿಂದೆ 12 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಕೈಗೊಳ್ಳಲಾಗಿದೆ ಎಂದು ಸ್ಥಳೀಯ ಜನರು ಹೇಳಿದ್ದಾರೆ.

ಖಾನಾಪುರ ತಾಲೂಕಿನಲ್ಲಿ ಮಂಗಳವಾರದ ದಿನದ ಮಳೆಯ ಪ್ರಮಾಣ: ಖಾನಾಪುರ-86.4.ಮಿಮೀ, ನಾಗರಾಗಾಳಿ 110.8ಮಿಮೀ, ಬೀಡಿ 68.8ಮಿಮೀ, ಲೋಂಡಾ ಪಿ.ಡಬ್ಲು.ಡಿ 115.4ಮಿಮೀ, ಲೋಂಡಾ ರೈಲ್ವೆ ಸ್ಟೆಷನ 113.0ಮಿಮೀ, ಜಾಂಬೋಟಿ 93.4ಮಿಮೀ, ಅಸೋಗಾ 66.0ಮಿಮೀ, ಗುಂಜಿ 149.2ಮಿಮೀ, ಕಕ್ಕೆರಿ 69.6ಮಿಮೀ, ಕಣಕುಂಬಿ 225.0ಮಿಮೀ.