SHARE

ಬೆಳಗಾವಿ: ಇನ್ನೂ ಅರ್ಧ ವರ್ಷ ಕಳೆದಿಲ್ಲ; ಆಗಲೇ ಸ್ಮಾರ್ಟ್ ರಸ್ತೆಯೊಂದು ಪಾಟ್ ಹೋಲ್ ಆಗಿದೆ ಎಂದು ಜವಾಬ್ದಾರಿಯುತ ಸಂಘಟನೆಯ ಹಿರಿಯ ನಾಗರಿಕರು ಪಾಲಿಕೆ ಮೇಯರ್ ಸಂಜೋತಾ ಬಾಂದೇಕರ ಅವರಿಗೆ ಮನವಿ ಸಲ್ಲಿಸಿದ ಸಂದರ್ಭ ಇವತ್ತು ನಡೆಯಿತು.

ನಾಲ್ಕಾರು ತಿಂಗಳು ಕಳೆದಿಲ್ಲ ಆಗಲೇ ವಿಸ್ತರಿತ ಹೊಸ ರಸ್ತೆಯೇ ಅಲ್ಲಲ್ಲಿ ಪಾಟ್‍ಹೊಲ್ ಬಿದ್ದಿದೆ ಹಾಗಾಗಿ ರಸ್ತೆಯ ಕಾಮಗಾರಿ ಕಳೆಪೆ ಮಾಡಿದ್ದಾರೆ ಎಂದು ಗುತ್ತಿಗೆದಾರರ ಕಳಪೆತನದ ಬಗ್ಗೆ ಸಂಶಯದ ಆಕ್ರೋಶ ವ್ಯಕ್ತಪಡಿಸಲಾಗಿದೆ. ಸಂಬಂಧಿಸಿದ ಅಧಿಕಾರಿಗಳು, ಗುತ್ತಿಗೆದಾರನ ವಿರುದ್ಧ ಉನ್ನತ ತನಿಖೆಯಾಗಬೇಕು ಮಹಾಪೌರ ಸಂಜೋತಾ ಬಾಂದೇಕರ ಅವರಿಗೆ ಸಣ್ಣ ಕೈಗಾರಿಕೆ ಸಂಘದ ಅಧ್ಯಕ್ಷ ಉಮೇಶ ಶರ್ಮಾ ನೇತೃತ್ವದಲ್ಲಿ ಜನತೆ ಆಗ್ರಹಿಸಿ ಇಂದು ಮನವಿ ಸಲ್ಲಿಸಿದರು.

ಗೋವಾವೆಸ್ ಮಹಾವೀರಭವನದಿಂದ ಪೀರನವಾಡಿ ಕ್ರಾಸ್ ವರೆಗೆ ಸುಮಾರು 30 ಕೋಟಿ ಅನುದಾನ ಬಳಸಿ ಕೊನೆಗೆ ಕಳಪೆ ಕಾಮಗಾರಿ ಮಾಡಿರುವುದರಿಂದ ರಸ್ತೆ ಮಧ್ಯದಲ್ಲಿಯೆ ಪಾಟ್‍ಹೋಲ್ ಬಿದ್ದಿರುವುದು ಅಸಹ್ಯಕರ ಎಂದರು. ಉದ್ಯಮಭಾಗದ ಸಣ್ಣ ಕೈಗಾರಿಕೆ ವಸಾಹತುವಿಗೆ ಯಾವುದೇ ಮೂಲಭೂತ ಸೌಲಭ್ಯಗಳನ್ನು ಪಾಲಿಕೆ ನೀಡುತ್ತಿಲ್ಲ. ನಮ್ಮಿಂದ ಪ್ರತಿವರ್ಷ ಕರವನ್ನು ತುಂಬಿಸಿಕೊಂಡು ಹೋಗುತ್ತಾರೆ ವಿನಃ ಯಾವೊಬ್ಬ ಚುಣಾಯಿತ ಪ್ರತಿನಿಧಿಗಳು ಉದ್ಯಮಿಗಳ ಸಮಸ್ಯೆಗಳನ್ನು ನೋಡಿ ಉದ್ಯಮಿಗಳಿಗೆ ಯಾವ ಸೌಲಭ್ಯ ನೀಡುತ್ತಿಲ್ಲ. ಕೈಗಾರಿಕೆಗಳಲ್ಲಿ ರಾತ್ರಿಯಾದರೆ ದರೋಡೆಗಳು ಆಗುತ್ತಿವೆ. ಈ ಕುರಿತು ಉದ್ಯಮಭಾಗದ ಪೊಲೀಸ್ ಠಾಣೆಗೂ ದೂರು ನೀಡಿದರು ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇಲ್ಲಿ ದರೋಡೆ ಮಾಡಿದ ಸಾಮಗ್ರಿಗಳನ್ನು ಬೇರೆ ರಾಜ್ಯಕ್ಕೆ ಮಾರಾಟ ಮಾಡುತ್ತಿದ್ದಾರೆ ಅದನ್ನು ಪೊಲೀಸರು ನೋಡಿ ನೋಡದಂತೆ ಇದ್ದಾರೆ. ಸಣ್ಣ ಕೈಗಾರಿಕೆ ಸಚಿವರ ಜಿಲ್ಲೆಯಲ್ಲಿಯೇ ಕೈಗಾರಿಕೆಗಳಿಗೆ ಈ ಪರಿಸ್ಥಿತಿ ಬಂದಿರುವುದು ದುರಾದೃಷ್ಟಕರ ಸಂಗತಿ.

ಕೈಗಾರಿಕೆ ಪ್ರದೇಶಕ್ಕೆ ಎಲ್ಲಿಯೂ ಒಂದು ಸಾರ್ವಜನಿಕ ಶೌಚಾಲಯವಿಲ್ಲ. ವ್ಯಾಪಾರಿಗಳು ಬಂದರೆ ಕೈಗಾರಿಕೆ ಉದ್ಯಮಿಗಳು ಮುಜುಗರಕ್ಕೆ ಈಡಾಗುತ್ತಿದ್ದಾರೆ. ನರೇಂದ್ರ ಮೋದಿ ಅವರು ಭಾರತ ನಿರ್ಮಲ ಯೋಜನೆ ಅಡಿ ಮನೆಗೊಂದು ಶೌಚಾಲಯ ನಿರ್ಮಾಣ ಮಾಡಿ ಎಂದು ಹೇಳುತ್ತಿದ್ದಾರೆ. ಆದರೆ ನಮಗೆ ಇದು ಅನ್ವಯವಾಗದಂತೆ ಇದೆ. ಮೋದಿ ಅವರು ಡಿಜಿಟಲ್ ಇಂಡಿಯಾ ಮಾಡಲು ಎಲ್ಲ ಕೈಗಾರಿಕೆಗಳನ್ನು ಪ್ರೋತ್ಸಾಹ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದಾರೆ ಆದರೆ, ನಮ್ಮ ಕೈಗಾರಿಕೆಗಳ ಉದ್ಯಮಿಗಳಿಗೆ ಯಾವುದೇ ಪ್ರೋತ್ಸಾಹ ದೊರೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಣ್ಣ ಕೈಗಾರಿಕೆ ಉಪಾಧ್ಯಕ್ಷ ರೋಹನ್ ಜವಳೆ, ಅಶೋಕ ಕೋಳಿ, ಸಂಜಯ ಸಿಂದೆ, ವೆಂಕಟೇಶ ಸರ್ನೋಬತ್, ಶ್ರೀದರ್ ಉಪ್ಪಿನ, ನೀತಿನ್ ಲಾಂಡಜೆ ಸೇರಿದಂತೆ ಇತರ ನೂರಾರು ಉದ್ಯಮಿಗಳು ಇದ್ದರು.