SHARE

ಬೆಳಗಾವಿ: ಮಿರಜ್ ಲಿಂಕ್ ಎಕ್ಷಪ್ರೆಸ್ ರೈಲಿಗೆ ಬಿದ್ದು ವ್ಯಕ್ತಿಯೊಬ್ಬ ತಡರಾತ್ರಿ ಆತ್ಮಹತ್ಯೆಗೊಳಗಾಗಿದ್ದಾನೆ. ನಗರದ 4th ರೈಲ್ವೇ ಗೇಟ್ ಬಳಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಂಬೆಳಿಗ್ಗೆ ನಡೆದಿದೆ.
ಅನಗೋಳದ ನಾಥ್ ಪೈ ನಗರದ ಆನಂದ ವೀರಭದ್ರಪ್ಪ ಬಡಗೇರ (30) ಮೃತ ವ್ಯಕ್ತಿ. ಅತಿಯಾಗಿ ಮದ್ಯ ಸೇವನೆ ಮಾಡುತ್ತಿದ್ದ ಈತನಿಗೆ ಮದ್ಯ ಸೇವನೆ ಬಿಡುವಂತೆ ಬೀಡಿದ ತಿಳಿವಳಿಕೆಗೆ ಬೇಸರಗೊಂಡಿದ್ದ ಎನ್ನಲಾಗಿದೆ. ಅಲ್ಲದೇ ಕೌಟುಬಿಂಕ ಕಲಹವೂ ಕಾರಣ ಎನ್ನಲಾಗಿದೆ. ಮಿರಜ್‍ ಹುಬ್ಬಳ್ಳಿ ಮಾರ್ಗದ ಲಿಂಕ್ ಎಕ್ಷಪ್ರೆಸ್ ರೈಲಿಗೆ ಬೆಳಿಗ್ಗೆ ತಲೆಕೊಟ್ಟು ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ರೈಲ್ವೆ ಹಾಗೂ ಟಿಳಕವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.