SHARE

ಬೆಳಗಾವಿ: ಚೀನಿ ಉತ್ಪಾದಿತ ವಸ್ತುಗಳನ್ನು ಬಂದ ಮಾಡುವಂತೆ ಆಗ್ರಹಿಸಿ ಶನಿವಾರ ಭಾರತೀಯ ಸೇವಾ ಸಂಘದ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಜ್ಯೋತಿ ಕಾಲೇಜಿನಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು ಬೋಗಾರವೇಸ್, ಕಾಲೇಜು ರಸ್ತೆ, ಚನ್ನಮ್ಮ ಸರ್ಕಲ್ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಚೀನಾ ವಸ್ತುಗಳ ಉತ್ಪಾದನೆಯ ವಿರುದ್ಧ ಘೋಷಣೆ ಕೂಗಿದರು.ವಿದೇಶಿ ಚೀನಾ, ಚೀನಿ ವಸ್ತುಗಳ ಖರೀದಿ ನಿಷೇಧಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿರುವ ಮನವಿಯಲ್ಲಿ ಆಗ್ರಹಿಸಿದ್ದಾರೆ. ವಿವೇಕಾನಂದ ಮಗದುಮ್ಮ, ಮನೋಹರ ಪಾಯಕ್ಕನ್ನವರ, ಚಿದಾನಂದ ಜಕಾತೆ ಸೇರಿದಂತೆ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.