SHARE

ಬೆಳಗಾವಿ: ಪ್ರಾದೇಶಿಕ ಆಯುಕ್ತರ ಕಾರ್ಯಾಲಯದ ಎದುರು ಅನಧಿಕೃತ ಕೆಂಪು- ಹಳದಿ ಧ್ವಜ ಹಾರಿಸಲಾಗಿದ್ದು; ಅದನ್ನು ತೆರೆಸುವವರೆಗೆ ಸುಮ್ಮನಿರುವುದಿಲ್ಲ ಎಂದು ಎಂಇಎಸ್ ಬೆಂಬಲಿತ ಯುವಕ ಸೂರಜ್ ಕಣಬರಕರ ಮಾಧ್ಯಮಗಳೆದುರು ಕನ್ನಡಿಗರಿಗೆ ಇಂದು ತೊಡೆ ತಟ್ಟಿದ್ದಾನೆ.

ರಾಷ್ಟಧ್ವಜ ಸೂರ್ಯೋದಯದಲ್ಲಿ ಏರಿಸಿ; ಸೂರ್ಯಾಸ್ತಕ್ಕೆ ಇಳಿಸಲಾಗುತ್ತದೆ. ಆದರೆ ಕನ್ನಡ ಧ್ವಜ ಎನ್ನಲಾಗುವ ಹಳದಿ-ಕೆಂಪು ಧ್ವಜ ಯಾವಾಗಲೂ ಹಾರಾಡುತ್ತಿರುತ್ತದೆ. ಇದು ರಾಷ್ಟ್ರಧ್ವಜಕ್ಕೆ ಅಪಮಾನ ಎಂದು ಭಾವಿಸಿ ಸೂಕ್ತ ಕ್ರಮಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ರಾಜ್ಯ ಸರಕಾರಕ್ಕೆ ಪತ್ರ ಬರೆಯಲಾಗಿತ್ತು. ಆದರೆ ಪ್ರಯೋಜನವಾಗದ್ದರಿಂದ ಕೇಂದ್ರ ಗೃಹ ಖಾತೆಗೆ ಪತ್ರ ಬರೆದು ಸದರಿ ಧ್ವಜ ತೆರೆಸಲು ಮಾಡಿದ ಮನವಿಗೆ ಕೇಂದ್ರದಿಂದ ಸ್ಪಂದನೆ ಸಿಕ್ಕಿದ್ದು, ಮುಖ್ಯ ಕಾರ್ಯದರ್ಶಿಗೆ ಸೂಚನಾ ಪತ್ರ ಬಂದಿದೆ. ಆ ಧ್ವಜ ತೆಗೆಯುವವರೆಗೂ ಸುಮ್ಮನಿರುವುದಿಲ್ಲ ಎಂದು ಯುವಕ ಸೂರಜ್ ಕಣಬರಕರ ಪ್ರಾದೇಶಿಕ ಆಯುಕ್ತರ ಕಚೇರಿ ಎದುರೇ ನಿಂತು ಹೂಂಕರಿಸಿದ್ದಾನೆ. ಗಡಿ ಮತ್ತು ಭಾಷಾ ವಿವಾದದ ಹೊರತಾಗಿ ಈ ಹೋರಾಟ ಎಂದು ತೇಪೆ ಹಚ್ಚುವ ಕೆಲಸ ಸೂರಜ್ ಈ ವೇಳೆ ಮರೆಯಲಿಲ್ಲ.

Belagavi/Belgaum city news now on just a click at thebelgaumnews.com