SHARE

ಬೆಳಗಾವಿ: ಬೈಲಹೊಂಗಲ ತಾಲೂಕು ವಕ್ಕುಂದ ಗ್ರಾಮ ಪಂಚಾಯಿತಿ ಪಿಡಿಓ ಒಬ್ಬರು ವಿಷ ಸೇವಿಸಿ ಇಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಣ್ಣಪ್ಪ ತೇಣಗಿ ಆತ್ಮಹತ್ಯೆಗೆ ಯತ್ನಿಸಿದ ಯುವ ಅಧಿಕಾರಿ. ವಿಷ ಸೇವಿಸಿದ್ದ ಅಣ್ಣಪ್ಪನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಮೇಲಧಿಕಾರಿಗಳು, ಸ್ಥಳೀಯ ಗ್ರಾ. ಪಂ. ಅಧ್ಯಕ್ಷರು ಹಾಗೂ ಸದಸ್ಯರ ಕಾಟದಿಂದ ಅಧಿಕಾರಿ ಆತ್ಮಹತ್ಯೆ ಯತ್ನದ ಹಾದಿ ಹಿಡಿದರು ಎನ್ನಲಾಗುತ್ತಿದೆ.