SHARE

ಬೆಳಗಾವಿ: ಹಿರೇಬಾಗೇವಾಡಿಯಲ್ಲಿ ಯಾವುದೇ ಕಾರಣಕ್ಕೂ ನಿಯೋಜಿತ ಅತ್ಯಾಧುನಿಕ ಕಸಾಯಿಖಾನಾ ಆಗಕೂಡದು ಎಂದು ಬಿಜೆಪಿ- ಕಾಂಗ್ರೆಸ್ ಪಕ್ಷಗಳು ಜಿಲ್ಲಾಡಳಿತವನ್ನು ಇಂದು ಆಗ್ರಹಿಸಿವೆ. ಬಜೆಪಿ ಗ್ರಾಮೀಣ ಶಾಸಕ ಸಂಜಯ ಪಾಟೀಲ ಹಾಗೂ ಕಾಂಗ್ರೆಸ್ ಮಹಿಳಾ ರಾಜ್ಯಾಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ನೇತೃತ್ವದಲ್ಲಿ ಹಿರೆಬಾಗೆವಾಡಿ ಗ್ರಾಮಸ್ಥರು ಇಂದು ತೀವೃ ಪ್ರತಿಭಟನೆ ನಡೆಸಿದರು. ರಾಜ್ಯ ಸರಕಾರ ಸಂಪುಟ ಸಭೆಯಲ್ಲಿ ಕಸಾಯಿಖಾನೆ ನಿರ್ಮಿಸುವ ಕುರಿತು ತೆಗೆದುಕೊಂಡ ನಿರ್ಧಾರ ಮರುಪರಿಶೀಲಿಸಬೇಕು. ಯಾವುದಾದರೂ ಬೇರೆ ಸ್ಥಳದಲ್ಲಿ ಸರಕಾರ ಮಾಡಿಕೊಳ್ಳಲಿ ಎಂದು ಇಬ್ಬರೂ ನಾಯಕರು ಆಗ್ರಹಿಸಿದರು. ಸುಮಾರು 90 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಕಸಾಯಿಖಾನೆ ನಿರ್ಮಾಣದ ಬಗ್ಗೆ ಸರಕಾರ ನಡೆಸುರುವ ಪ್ರಯತ್ನ ಹಿಂತೆಗೆದುಕೊಳ್ಳಬೇಕು. ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಬಗ್ಗೆ ಯಾವುದೇ ಪಕ್ಷದ ಸರಕಾರವಿದ್ದರೂ ಹೆಚ್ಚಿನ ಗಮನ ಹರಿಸಿ ಅಭಿವೃದ್ಧಿ ಮಾಡಬೇಕು ಎಂದು ಲಕ್ಷ್ಮೀ ಹೆಬ್ಬಾಳಕರ ಒತ್ತಾಯಿಸಿದರು. ಪ್ರತಿಭಟನೆ ತೀವೃಗೊಳಿಸುವ ಎಚ್ಚರಿಕೆ ನೀಡಿದರು.

Now get Belagavi/Belgaum news in Kannada only on kannada.thebelgaumnews.com