SHARE

ಬೆಳಗಾವಿ: ಮಹತ್ತರ ಬೆಳವಣಿಗೆಯೊಂದರಲ್ಲಿ ಬೆಳಗಾವಿ ನಗರ ಉತ್ತರ ಕ್ಷೇತ್ರಕ್ಜೆ *ರಾಯಭಾಗ ಹುಲಿ* ವಿ. ಎಲ್. ಪಾಟೀಲ ಪುತ್ರ ಮಾಜಿ ಸಂಸದ ಅಮರಸಿಂಹ ಪಾಟೀಲ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತವಾಗಿದೆ. ನಾಳೆ ಬೆಂಗಳೂರಿನ ಜಿಂದಾಲ್ ಸಭಾಭವನದಲ್ಲಿ ನಡೆಯುವ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಸಭೆಯಲ್ಲಿ ಟಿಕೆಟ್ ಖಚಿತವಾಗುವ ನಿರೀಕ್ಷೆ ಇದೆ.

ಬಿಜೆಪಿ ಹೈಕಮಾಂಡ್ ಬೆಳಗಾವಿ ಉತ್ತರ ಕ್ಷೇತ್ರದಿಂದ ಎಂಎಲ್ ಎ ಚುನಾವಣೆಗೆ ನಿಲ್ಲುವಂತೆ ಅಮರಸಿಂಹ ಪಾಟೀಲ ಅವರಿಗೆ ಸೂಚಿಸಿರುವುದು ಈಗ ಕಾಂಗ್ರೆಸ್ ವಲಯದಲ್ಲಿ ತಳಮಳ ಹೆಚ್ಚಿದೆ. ಹಾಲಿ ಶಾಸಕ ಫಿರೋಜ್ ಸೇಠ್ ಅವರ ಮುಂದಿನ ಮರು ಆಯ್ಕೆಗೆ ಭಾರಿ ಹೊಡತ ಬಿದ್ದಿದ್ದು ಇದರಿಂದ ಕಾಂಗ್ರೆಸ್ ಕಂಗಾಲಾಗಿದೆ. ಮಿತಭಾಷಿ, ರಾಜಕೀಯ ಮುತ್ಸದ್ಧಿ, ಪಾಶ್ಚಾತ್ಯ ಶಿಕ್ಷಣ ಪೂರೈಸಿರುವ ಸುಸಂಸ್ಕೃತ ಕುರುಬ ಸಮಾಜದ ಅಮರಸಿಂಹ ಸ್ಪರ್ಧೆಯನ್ನು ಆಹ್ವಾನಿಸುವುದಾಗಿ ಉತ್ತರ ಕ್ಷೇತ್ರದ ಪ್ರಾಜ್ಞ ಮತದಾರರಲ್ಲಿ ಕೆಲವರು ಪ್ರತಿಕ್ರಿಯಿಸಿದ್ದಾರೆ. ಸ್ವಪಕ್ಷೀಯ ಪಾಳೆಯದ ಉದಯೋನ್ಮುಖ ಟಿಕೇಟ್ ಆಕಾಂಕ್ಷಿ ನಾಯಕರುಗಳಿಗೆ ಹಿನ್ನಡೆಯಾದರೂ ಅಮರಸಿಂಹ ಸ್ಪರ್ಧೆ ಉತ್ತರ ಕ್ಷೇತ್ರದಲ್ಲಿ ಖಚಿತವಾಗಿದೆ.