SHARE

ಬೆಳಗಾವಿ: ನಗರದ ಶಹಾಪುರ ಗಾಡೆ ಮಾರ್ಗ ಸಂತಸೇನಾ ಮಹಾರಾಜರ ದೇವಸ್ಥಾನದ ಸ್ಥಾಪನಾ ದಿನದ ಅಂಗವಾಗಿ ಇಂದು ಸಂತಶ್ರೇಷ್ಠನ ಪಾದುಕೆಗೆ ಅಭಿಷೇಕ, ಆರತಿ ಹಾಗೂ ಪೂಜಾ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಆಗಮಿಸಿ ಶ್ರೀ ಸಂತಪಾದಪೀಠಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ಸಮಾಜದ ನಡುವೆ ಬೆಳೆದು ಬಂದ ನಾನು ನೋಡುದಂತೆ ಸಮಾಜ ಆರ್ಥಿಕ, ಸಾಮಾಜಿಕವಾಗಿ ಮುಂದೆ ಬಂದಿಲ್ಲ. ಸಮಾಜದ ಸುಧಾರಣೆ ಮಾಡುವ ಸಂಬಂಧ ಸರಕಾರ ಮತ್ತು ಜನಪ್ರತಿನಿಧಿ ವ್ಯವಸ್ಥೆ ಸಾಕಷ್ಟು ದುಡಿಯಬೇಕಿದೆ. ಶಹಾಪುರ ಭಾಗದಲ್ಲಿ ಹರಡಿರುವ ಸಂತ ಸೇನಾ ಸಮಾಜ ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಸಬಲರಾಗಬೇಕಾದ ಸಂದರ್ಭ ಈಗ ಒದಗಿಬಂದಿದೆ. ಸರಕಾರಿ ಸೌಲಭ್ಯ ಯೋಜನೆಗಳ ಬಗ್ಗೆ ತಿಳಿದು ಪ್ರಯೋಜನ ಪಡೆಯಬೇಕು. ಸರಕಾರದ ಯೋಜನೆ ಹಣಕಾಸಿನ ನೆರವು ಪಡೆದು ಗುಡಿ ಕೈಗಾರಿಕೆ ಮಾಡಿಕೊಳ್ಳಬೇಕು, ತಮ್ಮ ಮಕ್ಕಳಿಗೆ ಕಷ್ಟದ ಮಧ್ಯೆಯೂ ಉತ್ತಮ ಉನ್ನತ ಶಿಕ್ಷಣ ಕೊಡಿಸಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಬಾಬುರಾವ ಶಿವನಗೇಕರ, ವೈಜಯಂತ ಚವ್ಹಾನ, ಸೂರ್ಯಕಾಂತ ಶಿವನಗೇಕರ, ಸುರೇಶ ಸಾಡೇಕರ, ಮಹೇಶ ಬಾಮನೆ, ಕಾಕಡೆ ಸೇರಿದಂತೆ ಅಪಾರ ಭಕ್ತ ವೃಂದ ಸೇರಿದ್ದರು.