SHARE

ಬೆಳಗಾವಿ: ನಗರದಲ್ಲಿ ಅಂತಾರಾಷ್ಟ್ರೀಯ ದ್ರಾಕ್ಷಾರಸ ಉತ್ಸವ ಆ.18 ರಿಂದ 20 ರವರೆಗೆ ಮೂರು ದಿನ ಟಿಳಕವಾಡಿ ಮಿಲೇನಿಯಂ ಗಾರ್ಡನ್ ನಲ್ಲಿ ನಡೆಯಲಿದೆ. ರಾಷ್ಟ್ರೀಯ ವೈನ್ ತಯಾರಕರು ಭಾಗವಹಿಸಿ ವೈನ್ ಪ್ರದರ್ಶನ ಮತ್ತು ಮಾರಾಟ ಮಾಡಲಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ದ್ರಾಕ್ಷಾರಸ ಮಂಡಳಿ ಎಂಡಿ ಟಿ. ಸೋಮು ವೈನ್ ಬೆಳೆಯ ಉತ್ತೇಜನಕ್ಕಾಗಿ ಕರ್ನಾಟಕ ದ್ರಾಕ್ಷಾರಸ ಮಂಡಳಿ ಈ ದ್ರಾಕ್ಷಾರಸ ಉತ್ಸವ ಆಯೋಜಿಸುತ್ತಿದ್ದು, ಬೆಳಗಾವಿಯಲ್ಲಿ ಮೂರು ಬಾರಿ ದ್ರಾಕ್ಷಾರಸ ಯಶಸ್ವಿಯಾಗಿ ಆಯೋಜಿಸಿದ್ದು, ಈ ಬಾರಿ ಮತ್ತೆ ಆಯೋಜಿಸಲಾಗಿದೆ ಎಂದರು. ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಸುಮಾರು 12 ರಿಂದ 15 ವೈನರಿಗಳು ಭಾಗವಹಿಸಲಿದ್ದಾರೆ. ಸುಮಾರು 150 ಕ್ಕೂ ಹೆಚ್ಚು ತರಹೇವಾರಿ ವೈನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಯುರೋಪ್, ಆಸ್ಟ್ರೇಲಿಯ, ಅಮೆರಿಕಾ, ನ್ಯೂಜಿಲೆಂಡ್, ಚೀಲಿ ಬ್ರಾಂಡಗಳು ಸಿಗಲಿವೆ. ಆರೋಗ್ಯ ದೃಷ್ಟಿಯಿಂದ ಹಿತಮಿತ ಪ್ರಮಾಣದ ವೈನ್ ಸೇವನೆ ಹಿತಕಾರಿ, ಜತೆಗೆ ವೈನ್ ಸೇವನೆ ಸಮಯದ ಸೂಕ್ತ ತಿಂಡಿ ತಿನಿಸುಗಳು(snacks) ಲಭ್ಯವಿವೆ ಎಂದರು.

ಆ.18 ರ ಸಂಜೆ 5:30 ಕ್ಕೆ ಸಚಿವ ರಮೇಶ ಜಾರಕಿಹೊಳಿ ಉತ್ಸವ ಉದ್ಘಾಟಿಸುವರು. ತೋಟಗಾರಿಕಾ ಸಚಿವ ಎಸ್. ಎಸ್. ಮಲ್ಲಿಕಾರ್ಜುನ, ಶಾಸಕ ಸಂಭಾಜಿ ಪಾಟೀಲ ಭಾಗವಹಿಸುವರು. ಸಾರ್ವಹನಿಕರಿಗೆ ₹ 20 ಪ್ರವೇಶ ದರ ನಿಗದಿ ಮಾಡಲಾಗಿದೆ ಎಂದರು. ಮಂಡಳಿ ಅಧ್ಯಕ್ಷ ರವೀಂದ್ರ ಶಂಕರ ಮಿರ್ಜಿ, ತೊಟಗಾರಿಕಾ ಡಿಡಿ ಐ. ಕೆ. ದೊಡ್ಡಮನಿ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.