SHARE

ಬೆಳಗಾವಿ: ಪಾಲಿಕೆಯ ಅಧಿಕಾರಿಗಳು ಸಾವ೯ಜನಿಕರ ಹಣ ಉಳಿಸಲು ನಗರದಲ್ಲಿ ಎಲ್ ಇಡಿ ಬಲ್ಬ್ ಅಳವಡಿಕೆಗೆ ಮುಂದಾಗಿದ್ದಾರೆ. ಆದರೆ ಕರೆಂಟ್ ಗುತ್ತಿಗೆದಾರರು ಪಾಲಿಕೆಯ ಕಣ್ಣಿಗೆ ಮಣ್ಣೆರಚಿ ಸಾವ೯ಜನಿಕರ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ನಗರ ಸೇವಕ‌ ದಿನೇಶ ನಾಶಿಪುಡಿ ಸಭೆಯಲ್ಲಿ ಗಂಭೀರ ಆರೋಪ ಮಾಡಿದರು.

ಆಯುಕ್ತ ಶಶಿಧರ ಕುರೇರ ಪ್ರತಿಕ್ರಿಯಿಸಿ ಸದರಿ ವಿಷಯದ ದೂರು‌ ನೀಡಿರುವುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ನಗರ ಸೇವಕ ದಿನೇಶ ನಾಶಿಪುಡಿ ಸಮಾಧಾನಗೊಳ್ಳದೇ ನಗರ ಸೇವಕ‌ ಸ್ಥಾನಕ್ಕೆ ರಾಜೀನಾಮೆ ನೀಡಿ ಗುತ್ತಿಗೆದಾರರು ಸಾವ೯ಜನಿಕರ ಹಣ ಕೊಳ್ಳೆ ಹೊಡೆಯುವುದನ್ನು ತಪ್ಪಿಸುತ್ತೇನೆ ಎಂದರು. ಅನುಶ್ರೀ ದೇಶಪಾಂಡೆ ಮಾತನಾಡಿ ಎಲ್ ಇಡಿ ಬಲ್ಬ ಅಳವಡಿಸುವವರು ಬಾಲ ಕಾಮಿ೯ಕರಾಗಿದ್ದಾರೆ. ಇದರಿಂದ ಬೀದಿ ದೀಪ ಹಗಲಿನಲ್ಲೂ ಉರಿಯುತ್ತಿರುತ್ತವೆ. ಎಲ್ ಇಡಿ ಬಲ್ಬಗಿಂತ ಟೈಮರ್ ಲೈಟ್ ಅಳವಡಿಸಬೇಕೆಂದು ಹೇಳಿದರು. ಬಾಲಕಾರ್ಮಿಕರು, ಸಾರ್ವಜನಿಕರು ಹಾಗೂ ಮಹಿಳೆಯರು ಕರೆಂಟ್ ಆಪರೇಟ್ ಮಾಡುತ್ತಿದ್ದಾರೆ ಎಂದು ತಿಳಿಸಿದರು.