SHARE

ಬೆಳಗಾವಿ: ಹಿರಿಯ ರಂಗಭೂಮಿ ಕಲಾವಿದ ನಾಡೋಜ ಪ್ರಶಸ್ತಿ ಪುರಸ್ಕೃತ, ಶತಾಯುಷಿ ಏಣಗಿ ಬಾಳಪ್ಪಾ ಇನ್ನಿಲ್ಲ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಬಾಳಪ್ಪ ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಶುಕ್ರವಾರ ಮುಂಜಾನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿಯ ತಮ್ಮ ಸ್ವಗ್ರಹದಲ್ಲಿ ಕೊನೆಯುಸಿರೆಳೆದರು.

ಅವರು ತಮ್ಮ ಹಿಂದೆ ಪುತ್ರ ಸುಭಾಷ ಸಹಿತ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.ಸಾವಿರಾರು ಕಲಾವಿದ ಶಿಷ್ಯ ಕೋಟಿಯನ್ನು ಬೆಳೆಸಿರುವ ಅವರು ಅಂದದ್ದೇ ಹಾಡು,ಹಾಕಿದ್ದೇ ತಾಳ,ಬಳಿದುಕೊಂಡಿದ್ದೇ ಬಣ್ಣವಾಗಿತ್ತು. ಅವರ ನಿಧನಕ್ಕೆ ರಂಗಭೂಮಿಯೇ ಕಣ್ಣೀರಿಡುವಂತಾಗಿದೆ.