SHARE

ಬೆಳಗಾವಿ: ನಂಬಲಾಗದಿದ್ದರೂ ಸತ್ಯ. ನಗರದ ಅರಣ್ಯ ಭವನದ, ಡಿಸಿಎಫ್ ಕಚೇರಿ ಆವರಣದಲ್ಲಿ ಗಾಂಜಾ ಬೆಳೆದಿದೆ. ಇಂದು ಕಸ ಕಿತ್ತು ಸ್ವಚ್ಛತೆ ಕಾರ್ಯ ಮಾಡುತ್ತಿದ್ದಾಗ ಗಾಂಜಾ ಬೆಳವಣಿಗೆಯಾಗಿರುವುದು ಗಮನಕ್ಕೆ ಬಂದಿದ್ದು, ಗಾಂಜಾ ಬೆಳೆದ ಮಾಹಿತಿ ಹಿನ್ನೆಲೆಯ ಮಾರ್ಕೆಟ್ ಪೊಲೀಸರು ದಾಳಿ ಮಾಡಿದಾಗ ಗಾಂಜಾ ಬೆಳೆ ಪೊಲೀಸರಿಗೆ ಸಿಕ್ಕಿದ್ದು, ಕಸ ಸಹಿತ ಗಾಂಜಾ ಕೀಳುತ್ತಿದ್ದ ಅರಣ್ಯ ಇಲಾಖೆ ನೌಕರ ಹಾಗೂ ಆತನ ಸ್ನೇಹಿತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. Ganja leafಅರಣ್ಯ ಇಲಾಖೆಯ ನೌಕರ ಶ್ರೀರಾಮ ನಾರಾಯಣ ಅನಂತಪುರ(೫೮) ಹಾಗೂ ಆತನ ಸ್ನೇಹಿತ ಯಾಸಿನ್ ಸಂಧಿ(೫೫) ಪೊಲೀಸರ ವಶದಲ್ಲಿದ್ದಾರೆ. ಜತೆಗೆ ಗಾಂಜಾ ಬೆಳೆಯನ್ನೂ ಸಹ ವಶಕ್ಕೆ ಪಡೆಯಲಾಗಿದೆ. ಮುಂದಿನ ವಿಚಾರಣೆ ನಡೆದಿದೆ. ಪಿಎಸ್ ಐ ಸಿದ್ಧಪ್ಪ ಸೀಮಾನಿ ಹಾಗೂ ಸಿಬ್ಬಂಧಿ ಕಾರ್ಯಾಚರಣೆ ನಡೆಸಿದ್ದರು.