SHARE

ಬೆಳಗಾವಿ: ನಾಳೆಯಿಂದ ನಡೆಯುವ 12 ದಿನಗಳ ಬಂದೋಬಸ್ತ್ ನ್ನು ಎರಡು ಹಂತದಲ್ಲಿ ಮಾಡಲಾಗುವುದು ಎಂದು ಕಮಿಷ್ನರ್ ಟಿ. ಜಿ. ಕೃಷ್ಣಭಟ್ ತಿಳಿಸಿದರು. ಬಂದೋಬಸ್ತ್ ಗಾಗಿ ಹೊರ ಜಿಲ್ಲೆ ಹಾಗೂ ನಗರ ಪೊಲೀಸ್ ರ ಬೃಹತ್ ಸಂಖ್ಯೆಯ ಅಧಿಕಾರಿ ಹಾಗೂ ಸಿಬ್ಬಂಧಿ ಭಾಗವಹಿಸಲಿದ್ದಾರೆ ಎಂದರು. ನಗರ ಪೊಲೀಸ ಕಮಿಷ್ನರ್ ನೇತೃತ್ವದಲ್ಲಿ ನಾಲ್ಕು ಡಿಸಿಪಿ, 18 ಎಸಿಪಿ, 64 ಸಿಪಿಐ, 98 ಪಿಎಸ್ಐ, 270 ಎಎಸ್ ಐ, ಎಚ್ ಸಿ/ ಪಿಸಿ 2722 ಹಾಗೂ WHC75, ಹೋಮ ಗಾರ್ಡ್ 850 ಒಟ್ಟು 4102 ಸಿಬ್ಬಂಧಿ ಇರಲಿದ್ದಾರೆ.

ಬೇರೆ ಜಿಲ್ಲೆಗಳಿಂದ ಆಗಮಿಸುವ ಪೊಲೀಸ್ ಸಿಬ್ಬಂಧು ಪೈಕಿ ಇಬ್ಬರು ಎಸ್ಪಿ, 14ಡಿಎಸ್ಪಿ, 44 ಸಿಪಿಐ, 78 ಪಿಎಸ್ ಐ, 180 ಎಎಸ್ ಐ, ಎಚ್ ಸಿ/ ಪಿಸಿ 2245, ಹೋಮಗಾರ್ಡ 850 ಒಟ್ಟು 3413 ಎರಡು ಸೇರಿ ಸುಮಾರು 7500 ಪೊಲೀಸ್ ಸಿಬ್ಬಂಧಿ ಗಣೇಶ ಬಂದೋಬಸ್ತ ಮಾಡಲಿದ್ದಾರೆ. 10 ಪ್ಲಾಟೂನ್ ಕೆಎಸ್ ಆರ್ ಪಿ, ಎರಡು ಸಿಎಆರ್, QRT ಪ್ಲಾಟೂನ್ 1 ಇರುತ್ತವೆ‌.

ಮಹಾನಗರ ಪಾಲಿಕೆ, ಹೆಸ್ಕಾಂ, ಪರಿಸರ ಮಂಡಳಿ ಸಹಯೋಗ ಪಡೆಯಲಾಗಿದೆ. ಪ್ರತಿ ಪೂಲೀಸ್ ಠಾಣೆಯಲ್ಲಿ single window desk ಸ್ಥಾಪಿಸಿದ್ದು ಸಾರ್ವಜನಿಕ ಅಹವಾಲು ಸ್ವೀಕರಿಸಲಾಗುವುದು. ಹೆಚ್ಚುವರಿ 12 ದಿನ ಚಿತಾ ಪೆಟ್ರೋಲಿಂಗ್ ವಾಹನಗಳು, ಹಾಗೂ ಪೆದೆಗಳ foot petrolling, ಎರಡು ಮಹಿಳಾ ಪೆದೆಗಳ ಪಡೆ ಇರಲುವೆ.
ಡಾಲ್ಬಿಯಿಂದ ಯುವಕರಿಗೆ ಸಂತೋಷವಾಗುತ್ತಿತ್ತು ಜತೆಗೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು ಅದನ್ನು ಗಮನಿಸಿ ಡೆಸಿಬಲ್ ಹಾಗೂ ಪ್ರಖರ ಬೆಳಕು ನಿಷೇಧಿಸಲಾಗಿದೆ. ಸುಮಾರು 10 ಕಡೆಗೆ ಚೆಕ್ ಪೋಸ್ಟ್ ನಗರದಲ್ಲಿ ಅಳವಡಿಸಲಾಗಿದೆ ಎಂದರು. ಡಿಸಿಪಿಗಳಾದ ಸೀಮಾ ಲಾಟಕರ, ಅಮರನಾಥರೆಡ್ಡಿ, ಎಸಿಪಿ, ಇನ್ಸಪೆಕ್ಟರ್ ಗಳು ಹಾಜರಿದ್ದರು.