SHARE

ಬೆಳಗಾವಿ: ಬಕ್ರೀದ್ ಹಬ್ಬದ ನಿಮಿತ್ತ ಜಿಲ್ಲಾಧಿಕಾರಿ ಕಚೇರಿ ರಸ್ತೆಯ ಅಂಜುಮನ ಮೈದಾನದಲ್ಲಿ ಪವಿತ್ರ ಪ್ರಾರ್ಥನೆ ಸಾವಿರಾರು ಮುಸ್ಲಿಂ ಬಾಂಧವರಿಂದ ಇಂದು ನಡೆಯಿತು.Feroz Sait, MLA Congressತ್ಯಾಗ, ಬಲಿದಾನ ಸಂಕೇತದ ಬಕ್ರೀದ್ ಹಬ್ಬದಲ್ಲಿ
ಶಾಸಕ ಫಿರೋಜ್ ಸೇಠ್ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿ ಬೆಳಗಾವಿ ನಗರ ಮತ್ತು ಪೂರ್ಣ ಹಿಂದೂಸ್ತಾನದಲ್ಲಿ ಇಂದು ಈದ್ ಸಂಭ್ರಮ ಮೇರೆ ಮೀರಿದೆ. ಹಬ್ಬಗಳನ್ನು ಎಲ್ಲರೂ ಪರಸ್ಪರ ಒಗ್ಗೂಡಿ ಆಚರಿಸಬೇಕು. ಹಬ್ಬ ಇದ್ದವರು ಹಬ್ಬ ಇಲ್ಲದ ಇತರರನ್ನು ಕರೆದುಕೊಂಡು ಭೋಜನ ಸವಿಯುವ ಮೂಲಕ ಆನಂದ ಪಡಬೇಕು ಎಂದು ಫಿರೋಜ್ ಸೇಠ್ ಕರೆ ನೀಡಿದರು.T G KrishnaBhat, Police Commissioner, Belagaviಪೊಲೀಸ್ ಕಮಿಷ್ನರ್ ಟಿ. ಜಿ. ಕೃಷ್ಣಭಟ್ ಮಾತನಾಡಿ ಮುಸ್ಲಿಂ ಬಾಂಧವರ ಹಬ್ಬದ ಸಂಭ್ರಮದಲ್ಲಿ ನಾನು ಒಂದಾಗಿ ಆಚರಿಸುತ್ತಿದ್ದೇನೆ. ಈದ್ ಹಬ್ಬ ಸರ್ವರ ಬಾಳಲ್ಲಿ ಸುಖ ಶಾಂತಿ ನೆಮ್ಮದಿ ತರಲಿ ಎಂದು ಹಾರೈಸಿದರು.Suresh Itnal ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ, ಕಮಿಷ್ನರ್ ಕೃಷ್ಣಭಟ್, ಡಿಸಿಪಿ ಸೀಮಾ ಲಾಟಕರ ಶುಭಾಶಯ ಕೋರಿದರು.Baked/Eid-ul-Adha Celebration in Belagaviಪೊಲೀಸ್ ಅಧಿಕಾರಿಗಳು ಮಕ್ಕಳೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು. ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಹಬ್ಬದ ನಿಮಿತ್ತ ರಜೆಗೆ ತೆರಳಿದ್ದರು. ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಹಬ್ಬದ ವಾತಾವರಣವೇ ಸೃಷ್ಠಿಯಾಗಿತ್ತು.