SHARE

ಬೆಳಗಾವಿ: ನಾಡಿನ ಹಿರಿಯ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ ಅವರನ್ನು ದುಷ್ಕರ್ಮಿಗಳು ಬೆಂಗಳೂರಿನ ಅವರ ನಿವಾಸದಲ್ಲಿ ಗುಂಡಿಕ್ಕು ಕೊಲೆಗೈದ ದುಷ್ಕೃತ್ಯಕ್ಕೆ ಬೆಳಗಾವಿ ಮಾಧ್ಯಮ ವಲಯ ತೀವೃ ಅಸಮಧಾನ ವ್ಯಕ್ತಪಡಿಸಿದ್ದು, ಹಂತಕರನ್ನು ಪತ್ತೆ ಹಚ್ಚುವಂತೆ ಜಿಲ್ಲಾಧಿಕಾರಿಯನ್ನು ಇಂದು ಆಗ್ರಹಿಸಿತು. ಗೌರಿ ಲಂಕೇಶ ಒಬ್ಬ ಪ್ರಗತಿಪರ ಮಹಿಳಾ ಪತ್ರಕರ್ತೆಯಾಗಿದ್ದು, ನಿರ್ಭಿಡೆಯಿಂದ ಬರೆಯುವ ಖ್ಯಾತಿ ಹೊಂದಿದ್ದರು. ಪತ್ರಕರ್ತರು ಮತ್ತು ಬರಹಗಾರರನ್ನು ಹತ್ಯೆ ಮಾಡುವ ಇತ್ತೀಚಿನ ಅಸಹನೀಯ ಬೆಳವಣಿಗೆಗಳು ಚಿಂತೆಗೀಡುಮಾಡಿದೆ ಎಂದು ಪತ್ರಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಪ್ರತಿಕ್ರಿಯಿಸಿ ಮನವಿಯನ್ನು ಥಕ್ಷಣ ಸರಕಾರಕ್ಕೆ ಕಳುಹಿಸಲಾಗುವುದು ಎಂದರು. ಬೆಳಗಾವಿ ಜಿಲ್ಲೆ ಮತ್ತು ನಗರ ಪೋಲೀಸ್ ವ್ಯಾಪ್ತಿಯಲ್ಲಿ ಈ ಹಿಂದೆ ಸ್ವತಃ ಪೊಲೀಸ್ ಅಧಿಕಾರಿಗಳಿಂದ ಪತ್ರಕರ್ತರ ಮೇಲೆ ಹಲ್ಲೆ ನಡೆದ ಬಗ್ಗೆ ಮನವಿ ಸಲ್ಲಿಸಿದರೂ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿಲ್ಲ ಎಂದು ಹಿರಿಯ ಪತ್ರಕರ್ತರು ಜಿಲ್ಲಾಧಿಕಾರಿ ಗಮನ ಸೆಳೆದರು.

ಎಡಿಟರ್ಸ್ ಅಸೋಸಿಯೇಶನ್, ಫೋಟೊ ಜರ್ನಾಲಿಸ್ಟ್ಸ್ ಹಾಗೂ ಇತರ ಪತ್ರಿಕಾ ಸಂಘಟನೆಗಳು, ವರದಿಗಾರರು ಭಾಗವಹಿಸಿದ್ದರು. ವಿಲಾಸ ಜೋಶಿ, ಮುರಗೇಶ ಶಿವಪೂಜಿ, ದಿಲೀಪ ಕುರಂದವಾಡೆ, ಸುಭಾಷ ಕುಲಕರ್ಣಿ, ಚಂದ್ರಕಾಂತ ಸುಗಂದಿ, ಕೀರ್ತಿ ಕಾಸರಗೋಡ, ಲೀನಾ ಟೋಪನ್ನವರ, ನಟರಾಜ ಹಂಜಗಿಮಠ, ನೌಶಾದ ಬಿಜಾಪುರ, ಶ್ರೀಶೈಲ್ ಮಠದ, ಶ್ರೀಕಾಂತ ಕುಬಕಡ್ಡಿ, ಶ್ರೀಕಾಂತ ಕಲ್ಲಮ್ಮನವರ, ಕಿಶೋರ ಮಿಠಾರಿ, ಮಂಜುನಾಥ ಕೋಳಿಗುಡ್ಡ, ಪಾರೇಶ ಭೋಸಲೆ, ಕುಂತಿನಾಥ ಕಲಮನಿ, ಸದಾಶಿವ ಸಂಕಪ್ಪಗೋಳ, ವಿಜಯ ಮುಚಳಂಬಿ, ಸಂಪತ್ ಮುಚಳಂಬಿ, ಮಹೇಶ ವಿಜಾಪುರ, ಕಿರಣ ಮಾಸನಗಿ, ಸುನೀಲ ಪಾಟೀಲ, ಜಗದೀಶ ವೀರಕ್ತಮಠ, ಸುರೇಶ ನೇರ್ಲಿ, ಜಿ. ಪುರುಷೋತ್ತಮ, ಮಾಲ್ತೇಶ ಹೂಲಿಹಳ್ಳಿ, ಪ್ರಮೋದ ಹರಿಕಾಂತ, ಸುರೇಶ ಟೋಪನ್ನವರ, ರಾಜ ಹಿರೇಮಠ, ವಿಶ್ವನಾಥ ದೇಸಾಯಿ, ಅರುಣ ಯಳ್ಳುರಕರ, ರಾಜ ಹಿರೇಮಠ, ನಾಗರಾಜ ತುಪ್ಪದ, ಎಚ್. ವಿ. ನಾಗರಾಜ ಸೇರಿದಂತೆ ಎಲ್ಲ ಪತ್ರಕರ್ತರು ಭಾಗವಹಿಸಿದ್ದರು.