SHARE

ಬೆಳಗಾವಿ: ಸಂಚಾರ ನಿಯಮ ಪಾಲಿಸ್ರಿ…ಎಂದು ಪೊಲೀಸರು ಎಷ್ಟೇ ಗೋಗರೆಯುತ್ತಿದ್ದರೂ ಕೇಳದ ಸಾರ್ವಜನಿಕರು ಅಪಘಾತಗಳಿಗೆ ತಮ್ಮಷ್ಟಕ್ಕೆ ತಾವೇ ಈಡಾಗುತ್ತಿದ್ದಾರೆ. ಹೆಲ್ಮೇಟ್ ಧರಿಸದೇ ಅತಿ ವೇಗವಾಗಿ ಚಲಿಸುತ್ತಿದ್ದ Activa ಸವಾರ ಗಾಂಧಿ ನಗರದ ಜುನೇದ್ ಎಂಬಾತ ಟಿಪ್ಪರ್ ಹಿಂದಿನ ಚಕ್ರಗಳಿಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಚನ್ನಮ್ಮ ಸಿಗ್ನಲ್ ನಿಂದ ಬೋಗಾರವೆಸ್ ಎಡೆಗೆ ತೆರಳುತ್ತಿದ್ದ ಜುನೇದ್ ಟ್ರಾಫಿಕ್ ಸಿಗ್ನಲ್ ಇದ್ದರೂ ಗಮನಿಸದೇ ವೇಗವಾಗಿ ಎಲ್ಲರನ್ನೂ ಓವರಟೇಕ್ ಮಾಡಬೇಕೆನ್ನುವ ಹುಚ್ಚು ಭರದಲ್ಲಿ ಮುಂದೆ ಚಲಿಸುತ್ತಿದ್ದ ಟಿಪ್ಪರ್ ನ ಹಿಂದಿನ ಚಕ್ರಗಳಿಗೆ ಆಯಾ ತಪ್ಪಿಬಿದ್ದು ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ವಿದ್ಯಾರ್ಥಿಯಾಗಿ ಜತೆಗೆ Flipkart ಮತ್ತು Amazon ಸಂಸ್ಥೆಗಳ ವಿತರಕನಾಗಿ (Delivery boy) ದುಡಿಯುತ್ತಿದ್ದ ಎನ್ನಲಾಗಿದೆ. ಪ್ರಕರಣ ಉತ್ತರ ಸಂಚಾರಿ ಠಾಣೆಯಲ್ಲಿ ದಾಖಲಾಗಿದೆ.