SHARE

ಬೆಳಗಾವಿ: ಉನ್ನತ ದರ್ಜೆಗೇರಿದ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ಸೆ. 14 ರಂದು ಲೋಕಾರ್ಪಣೆಗೊಳ್ಳಲಿದೆ. ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಸಂಸದ ಸುರೇಶ ಅಂಗಡಿ ಸ್ಮಾರ್ಟ್ ಸಿಟಿ ಆಗಿರುವ ಬೆಳಗಾವಿಗೆ ನೂತನ ವಿಮಾನ‌ ನಿಲ್ದಾಣವೂ ಸೇರಿಕೊಂಡಿತು. ಇದು ಗುರುವಾರ ಉದ್ಘಾಟನೆಗೊಳ್ಳಲಿದೆ.Suresh Angadi, MP, BJPಮಂಗಳವಾರ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಹೊಸ ನಿಲ್ದಾಣ ವೀಕ್ಷಣೆ ಮತ್ತು ಅಧಿಕಾರಿಗಳ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿ ಬೆಳಗಾವಿಯ ಸಾರ್ವಜನಿಕರ ಬಹುವರ್ಷಗಳ ಬೇಡಿಕೆಯಂತೆ ಸಾಂಬ್ರಾ ವಿಮಾನ ನಿಲ್ದಾಣವನ್ನು‌‌ ಮೇಲ್ದರ್ಜೆಗೆ ಏರಿಸಲಾಗಿದೆ. ವಿಮಾನ ನಿಲ್ದಾಣ ನಿರ್ಮಿಸಲು ಅಂದು ಭೂಮಿ‌ ನೀಡಿದ್ದು ರೈತರು, ಅವರ ಕೊಡುಗೆ ಅಪಾರ ಎಂದು ಅಂಗಡಿ ಸ್ಮರಿಸಿಕೊಂಡರು. ಸಾಂಬ್ರಾ ನೂತನ ವಿಮಾನ ನಿಲ್ದಾಣ ಉದ್ಘಾಟನೆಗೆ ವಿಮಾನ ಯಾನ ಸಚಿವ ಗಜಪತಿರಾಜು ನೆರವೆರಿಸಲಿದ್ದಾರೆ. ಕೇಂದ್ರ ರಾಸಾಯನಿಕ ಸಚಿವ ಅನಂತಕುಮಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಆಗಮಿಸಲಿದ್ದಾರೆ.

ಸಾಂಬ್ರಾ ಜನರಿಗೂ ಸಂಚಾರಕ್ಕೆ ಸೂಕ್ತ ರಸ್ತೆ ನಿರ್ಮಾಣ ಮಾಡಿಕೊಡಲು ಮುಖ್ಯಮಂತ್ರಿಗಳು ಬೆಳಗಾವಿಗೆ ಆಗಮಿಸಲಿದ್ದಾರೆ‌ ಅವರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಭಾ‌ ಸದಸ್ಯ ಡಾ. ಪ್ರಭಾಕರ ಕೋರೆ, ಶಾಸಕ ಸಂಜಯ ಪಾಟೀಲ ಉಪಸ್ಥಿತರಿದ್ದರು.