SHARE

ಬೆಳಗಾವಿ: ಬಹುದಿನಗಳ ನಿರೀಕ್ಷೆಯ ಸುಸಜ್ಜಿತ ವಿಮಾನ ನಿಲ್ದಾಣ ಕನಸು ಬೆಳಗಾವಿಗರಿಗೆ ಇಂದು ನನಸಾಗಿದೆ.
ಇಂದು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಕೇಂದ್ರ ವಿಮಾನಯಾನ ಸಚಿವಾಲಯ, ರಾಜ್ಯ ಸರಕಾರದ ಸಹಯೋಗದಲ್ಲಿ ಮೇಲ್ದರ್ಜೆಗೇರಿದ ವಿಮಾನ ನಿಲ್ದಾಣವನ್ನು ಲೋಕಾರ್ಪಣೆಗೊಳಿಸಿತು. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಶೋಕ ಗಜಪತಿರಾಜು ಏರಪೋರ್ಟ್ ಉದ್ಘಾಟಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಅನಂತಕುಮಾರ, ಸಚಿವರಾದ ಆರ್. ವಿ. ದೇಶಪಾಂಡೆ, ಡಿ. ಕೆ. ಶಿವಕುಮಾರ, ರಮೇಶ ಜಾರಕಿಹೊಳಿ, ಸಂಸದ ಸುರೇಶ ಅಂಗಡಿ, ಪ್ರಭಾಕರ್ ಕೋರೆ, ಶಾಸಕ ಸಂಜಯ ಪಾಟೀಲ, ಮೇಯರ್ ಸಂಜೋತಾ ಬಾಂದೇಕರ, ಜಿಪಂ. ಅಧ್ಯಕ್ಷೆ ಆಶಾ ಐಹೊಳೆ ಸೇರಿದಂತೆ ಕೇಂದ್ರ ರಾಜ್ಯ ಸರಕಾರಗಳ ಅಧಿಕಾರಿಗಳು ಭಾಗವಹಿಸಿದ್ದರು.

ದೇಶದ ಪ್ರಮುಖ ವಾಣಿಜ್ಯ ನಗರಗಳಾದ ಡಾಬೋಲಿಯಂ, ಮುಂಬೈ, ಹೈದ್ರಾಬಾದ್, ಪೂನಾ, ದೆಹಲಿ, ಬೆಂಗಳೂರು, ಭುಬನೇಶ್ವರ, ಚೆನ್ನೈ ಇತರ ನಗರಗಳಿಗೆ ಇನ್ನೂ ಪದರಯಾಣಿಕ ಹಾಗೂ ವಾನಿಜ್ಯ ಸರಕು ಸಾಗಾಣೆ ವಿಮಾನಗಳ ಓಡಾಟ ಸಾಧ್ಯವಾಗಲಿದೆ.