SHARE

ಬೆಳಗಾವಿ: ನಗರದ ಗೋವಾವೆಸ್ ವೃತ್ತದಲ್ಲಿ ಸಿಬಿಟಿ 2ನೇ ಡಿಪೋ ಬಸ್ ಹರಿದು ಸೈಕಲ್ ಸವಾರ ನಗರದ ಶಹಾಪುರ ಕೋರೆ ಗಲ್ಲಿ ನಿವಾಸಿ ಒಬ್ಬರು ಅಸುನೀಗಿದ್ದಾರೆ. ಸೈಕಲ್ ಮೇಲೆ ತೆರಳುತ್ತಿದ್ದ ವ್ಯಕ್ತಿಗೆ ಸರಕಾರಿ ಬಸ್ ತಗುಲಿದ್ದರಿಂದ ಈ ಅವಘಡ ಇಂದು ಇಳಿ ಮಧ್ಯಾಹ್ನ ನಡೆದಿದೆ. ಮೃತನನ್ನು ಗೋಪಾಲ ಎಂದು ಗುರುತಿಸಲಾಗಿದ್ದು, ದಕ್ಷಿಣ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.