SHARE

ಬೆಳಗಾವಿ: ಮೇಲ್ದರ್ಜೆಗೇರಿದ ವಿಮಾನ ನಿಲ್ದಾಣದ ಉದ್ಘಾಟನೆಯ ಅವಸರದಲ್ಲಿ ಬಿಜೆಪಿ ಶಾಸಕ ಸಂಜಯ ಪಾಟೀಲ ಭಾವಚಿತ್ರ ಕಿಡಿಗೇಡಿಗಳು ಹರಿದು ಹಾಕಿರುವುದು ಬೆಳಕಿಗೆ ಬಂದಿದೆ. ವಿರೋಧ ಪಕ್ಷದಲ್ಲಿ ಆಗದವರ ಕಿತಾಪತಿಯೆಂದು ಬಿಜೆಪಿಯ ಕೆಲ ನಾಯಕರು ಪ್ರತಿಕ್ರಯಿಸಿದ್ದಾರೆ. ವಿಮಾನ ನಿಲ್ದಾಣಕ್ಕೆ ಜಾಗ ಕಳೆದುಕೊಂಡ ರೈತರು ಸಹ ಪರಿಹಾರ ಕೊಟ್ಟು ವಿಮಾನ ಹಾರಿಸುವಂತೆ ಸಂಸದ ಸುರೇಶ ಅಂಗಡಿ ಮತ್ತು ಶಾಸಕ ಸಂಜಯ ಪಾಟೀಲ ಅವರಿಗೆ ಮನವಿ ಮಾಡಿದ್ದರು. ರೈತರಿಗೆ ಪರಿಹಾರ ನೀಡಬೇಕಿರುವ ವಿಷಯ ಸ್ವತಃ ಶಾಸಕ ಸಂಜಯ ಪಾಟೀಲರು ತಮಗೆ ಗೊತ್ತಿಲ್ಲ ಎಂಬ ಉಡಾಫೆ ರೈತರಿಗೆ ಹೇಳಿಕೆ ನೀಡಿದ್ದರೆನ್ನಲಾದ ವಿಷಯ ಇಂತದ್ದೊಂದ ಬೆಳವಣಿಗೆಗೆ ಮೂಕ ಎಂದು ಸಹ ಶಂಕಿಸಲಾಗಿದೆ.

ಅಲ್ಲದೆ ಸಾಂಬ್ರಾ ರೈತರ ಹೊರಾಟ ಬಹಳ ದಿನಗಳಿಂದ ನಡೆಯುತ್ತಿದ್ದರೂ ಶಾಸಕ‌ ಸಂಜಯ ಪಾಟೀಲರಿಗೆ ಮಾತ್ರ ಈ ವಿಷಯ ಅವರಿಗೆ ಗೋತ್ತೆ ಇಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮೀಣ ಶಾಸಕ‌ ಸಂಜಯ ಪಾಟೀಲರ ಚಿತ್ರ ಹರಿದು ಹಾಕಿದ್ದಾರೆ ಎನ್ನಲಾಗುತ್ತಿದೆ. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿದೆ.