SHARE

ಬೆಳಗಾವಿ/ಖಾನಾಪುರ: ಅಂಜಲಿ ನಿಂಬಾಳ್ಕರ ವಿರುದ್ಧ “ನಾಶೀರ ಅಣ್ಣಾ ಬಾಗವಾನ” ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ “ಶಕ್ತಿ ಪ್ರದರ್ಶನ” ಶುಕ್ರವಾರ ದಿನದಂದು ಬೀಡಿ ಗ್ರಾಮದಲ್ಲಿ ನಡೆದಿದೆ. ಮುಂಬರುವ ೨೦೧೮ರ ವಿಧಾನ ಸಭಾ ಚುನಾವಣೆಯಲ್ಲಿ ಖಾನಾಪುರ ವಿಧಾನ ಸಭಾ ಕ್ಷೇತ್ರದಿಂದ ಸ್ಪಷ್ಟ ಬಹುಮತಗಳನ್ನು ಪಡೆಯುವುದಲ್ಲದೆ ನಮ್ಮ ಮುಂದಿನ ಹಾಗೂ ಭಾವಿ ಶಾಸಕರು ನಾಶೀರ ಅಣ್ಣಾ ಬಾಗವಾನ ಎಂದು ಸಭೆಯದುದ್ದಕ್ಕೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಹಾಗೂ ನಾಶೀರ ಅಣ್ಣಾ ಬಾಗವಾನ ಅಭಿಮಾನಿ ಬಳಗದಿಂದ ಮಾತುಗಳು ಪದೇ ಪದೇ ಕೇಳಿಬರುತ್ತಿದ್ದವು.ಕಳೆದ ಚುನಾವಣೆಯಲ್ಲಿ ಖಾನಾಪೂರ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಸ್ಪರ್ದಿಸಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯ ಸೋಲಿಗೆ ಕಾರಣವಾಗಿದ್ದರೂ, ಅಂಜಲಿ ನಿಂಬಾಳ್ಕರ ಅವರನ್ನು ಕೆಪಿಸಿಸಿಯು ಭಾಲಭವನದ ಅದ್ಯಕ್ಷರನ್ನಾಗಿ ನೇಮಕ ಮಾಡಿದೆ. ಅಲ್ಲದೇ ಸಂಕೇಶ್ವರ ಕ್ಷೇತ್ರದಿಂದ ಅವರನ್ನು ಕೆಪಿಸಿಸಿ ಸದಸ್ಯರನ್ನಾಗಿ ಮಾಡಿದೆ, ಹುಕ್ಕೇರಿ ತಾಲೂಕಿನ ಸಂಕೇಶ್ವರದಿಂದ ಅವರ ನೇಮಕ ಆಗಿದ್ದರೂ, ವಿನಾಕಾರಣ ಅಂಜಲಿ ನಿಂಬಾಳ್ಕರ ಅವರು ಖಾನಾಪೂರ ಕ್ಷೇತ್ರದಲ್ಲಿ ತಲೆಹಾಕುತ್ತಿದ್ದಾರೆ ಎಂದು ಆರೋಪಿಸಿ ಖಾನಾಪೂರ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಇಂದು ಬೀಡಿಯಲ್ಲಿ ಬೃಹತ್ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯಕರ್ತರಿಂದ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ರಾಜಕಾರಣಿ ವಕೀಲ ಸಿ ಬಿ ಅಂಬೋಜಿ ಅವರನ್ನು ಮರು ನೇಮಕ ಮಾಡಬೇಕು. ಹಾಗೂ ನಾಶೀರ ಬಾಗವಾನ ಅವರನ್ನು ೨೦೧೮ರ ಚುನಾವಣೆಯ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಬೇಕು ಎಂದು‌ ಕಾರ್ಯಕರ್ತರು ಆಗ್ರಹಿಸಿದರು .