SHARE

ಬೆಳಗಾವಿ: ಮುಂಬರುವ ವಿಧಾನಸಭೆಯ ಚುನಾವಣೆಗೆ ಉತ್ತರ ಕರ್ನಾಟಕದಿಂದಲೇ ಸ್ಪರ್ಧಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಠಪಡಿಸಿದ್ದಾರೆ. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಇನ್ನೂ ಕ್ಷೇತ್ರವನ್ನು ಗುರುತಿಸಿಕೊಂಡಿಲ್ಲ. ಉತ್ತರ ಕರ್ನಾಟಕದಲ್ಲಿ ಪಕ್ಷದ ಬಲವರ್ಧನೆಗೆ ವರಿಷ್ಠರು ಸೂಚಿಸಿರುವುದರಿಂದ ನನ್ನ ಸ್ವಕ್ಷೇತ್ರ ಶಿಕಾರಿಪುರವನ್ನು ಬಿಡುತ್ತಿದ್ದೇನೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಸಲ್ಲದ ಆರೋಪ ಮಾಡುವುದನ್ನು ಬಿಡಬೇಕು. ಯಾವುದೇ ದಾಖಲೆಗಳಿದ್ದರೆ ಬಹಿರಂಗಪಡಿಸಲಿ. ನನ್ನ ವಿರುದ್ಧ ಎಫ್ ಐಆರ್ ಆಗಲುವೆ ಎಂಬ ಸಿಎಂ ಮಾತಿನಲ್ಲಿ ಹುರುಳಿಲ್ಲ ಎಂದು ಬಿಎಸ್ವೈ ವ್ಯಂಗ್ಯವಾಡಿದರು. ಶಿವರಾಂ ಕಾರಂತ್ ಬಡಾವಣೆಯ ಡಿನೋಟಿಫೀಕೇಶನ ವಿಚಾರದಲ್ಲಿ‌ ನಾನೇನು ತಪ್ಪು ಮಾಡಿಲ್ಲ ಎಂದು ಪ್ರಶ್ನೆಯೊಂದನ್ನು ತಳ್ಳಿ ಹಾಕಿದರು.

ಸಂಸದ ಸುರೇಶ ಅಂಗಡಿ, ರಮೇಶ ಕತ್ತಿ, ಶಾಸಕ ಉಮೇಶ ಕತ್ತಿ, ಶಾಸಕ ಸಂಜಯ ಪಾಟೀಲ, ಜಿಲ್ಲಾಧ್ಯಕ್ಷ ವಿಶ್ವನಾಥ ಪಾಟೀಲ, ಆನಂದ ಮಾಮನಿ, ಶಶಿಕಾಂತ ನಾಯಿಕ, ರಾಜು ಟೋಪಣ್ಣವರ, ಅಭಯ ಪಾಟೀಲ, ಅನಿಲ ಬೆನಕೆ, ಪಿ.ಡಿ. ದೋತ್ರೆ ಇತರರು ಹಾಜರಿದ್ದರು.