SHARE

ಬೆಳಗಾವಿ/ತುಮಕೂರು: ಶಸ್ತ್ರಚಿಕಿತ್ಸೆಗೆ ಒಳಗಾದ ಮಾಜಿ ಸಿಎಂ  ಎಚ್ ಡಿ ಕುಮಾರಸ್ವಾಮಿಯನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸುವ ಆಸೆ ನನಗಿದೆ. ಆದ್ರೆ ಅವರ ಕಡೆಯವರು ನನ್ನನ್ನು ಬಿಡಲ್ಲ ಎಂದು ಜೆಡಿಎಸ್ ಉಚ್ಚಾಟಿತ ಶಾಸಕ ಜಮಿರ್ ಅಹಮದ್ ಹೇಳಿದ್ದಾರೆ.

ತುಮಕೂರು ತಾಲೂಕಿನ ಹೆಬ್ಬೂರಿನಲ್ಲಿ ಮಾತನಾಡಿದ ಅವರು ಕುಮಾರಸ್ವಾಮಿಯವರು ಶೀಘ್ರ ಗುಣಮುಖರಾಗಲಿ ಎಂದು ನಾನು ಶುಕ್ರವಾರ ದಿನ ಅಲ್ಲಾನಲ್ಲಿ ಪ್ರಾರ್ಥನೆ ಮಾಡಿದ್ದೇನೆ. ಅಲ್ಲದೆ ಅವರ ಆರೋಗ್ಯ ವಿಚಾರಿಸಲು ಇಬ್ಬರು ಆಪ್ತಸಹಾಯಕರಿಗೆ ಫೋನ್ ಕೂಡಾ ಮಾಡಿದ್ದೇನೆ ಆದರೆ ಅವರು ರಿಸಿವ್ ಮಾಡಿಲ್ಲ ಎಂದರು. ಈಗಲೂ ಕುಮಾರಸ್ವಾಮಿಯವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಬೇಕು ಎಂಬ ತವಕ ನನಗಿದೆ. ಅವರ ಕಡೆಯವರು ಭೇಟಿ ಮಾಡಲು ಅವಕಾಶ ಕೊಡಲ್ಲ ಎಂದರು.

ಮೊದಲ ಬಾರಿ ಆಪರೇಷನ್ ಆದ ವೇಳೆ ನಾನು ಜೊತೆಗಿದ್ದೆ. ಈಗ ಇಲ್ಲ. ರಾಜಕೀಯ ಬೇರೆ, ವೈಯಕ್ತಿಕ ಬೇರೆ. ದೇವರು ಕುಮಾರಸ್ವಾಮಿಯವರಿಗೆ ಒಳ್ಳೆ ಆರೋಗ್ಯ ಕೊಡಲಿ ಎಂದು ಜಮಿರ್ ಆಹಮದ್ ಹಾರೈಸಿದ್ದಾರೆ.