SHARE

ಬೆಳಗಾವಿ: ನೆಹರು ನಗರ ಮುಖ್ಯರಸ್ತೆಯ ಆದಿತ್ಯ ಆರ್ಕೆಡ್ ಕಟ್ಟಡದ ಬಳಿ ನಿಷೇಧಿತ ಗಾಂಜಾ ಮಾದಕ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಎಪಿಎಂಸಿ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ. ನೆರೆಯ ಬಾಗಲಕೋಟ ಜಿಲ್ಲೆ ತೇರದಾಳ ಪಟ್ಟಣದ ರಾಜು ಹುಸೇನಸಾಬ ಅವಟಿ, ಮಹಾನಿಂಗ ಕೆಮೂರಿ ಬಂಧಿತರು. ಬೆಳಗ್ಗೆ ನೆಹರು ನಗರದ ಆದಿತ್ಯಾ ಆರ್ಕೆಡ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಬರುತ್ತಿದ್ದಂತೆ ಪೊಲೀಸರು ದಾಳಿ ನಡೆಸಿ ಸುಮಾರು ₹ 11 ಸಾವಿರ ಮೌಲ್ಯದ 1ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.