SHARE

ಬೆಳಗಾವಿ: ರೈಲ್ವೇ ಓವರಬ್ರಿಡ್ಜ್ ನಿಯೋಜಿತ ಕಾಮಗಾರಿ ನಿಮಿತ್ತ trial ಗಾಗಿ ಸೇತುವೆ ಬಂದ್ ಮಾಡುತ್ತಿದ್ದಂತೆ ಒಂದೇ ದಿನಕ್ಕೆ ಜನಜೀವನ ಕಂಗೆಟ್ಟು, ಸಾರ್ವಜನಿಕರು ರೋಸಿ ಹೋಗಿದ್ದಾರೆ. ಇಡೀ ನಗರದ ಅರ್ಧ ಭಾಗವೇ ಉತ್ತರದ ಬೆಳಗಾವಿಯೊಂದಿಗೆ ಸಂಪರ್ಕ ಕಳೆದುಕೊಂಡು ಶಾಲಾ ಕಾಲೇಜು ಮಕ್ಕಳು, ಅಂಬ್ಯುಲೆನ್ಸ್, ಸಾಮಾನ್ಯ ಜನತೆ ಹಾಗೂ ವ್ಯಾಪಾರಿಗಳು ವ್ಯಸನಪಟ್ಟು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.

ಸಾಮಾನ್ಯ ಸಂದರ್ಭದಲ್ಲೇ 1st ಗೇಟ್ ಮತ್ತು 2nd ಗೇಟ್ ಸೇರಿದಂತೆ ಇತರ ಪ್ರದೇಶಗಳು ಟ್ರಾಫಿಕ್ ಜಾಮ್ ಆಗಿರುತ್ತವೆ. ಅದರಲ್ಲಿ ಮುಖ್ಯ ಸಂಪರ್ಕ ಸೇತುವೆಯೇ ಬಂದಾದರೆ ಏನಾಗಿರಬೇಡ..! ಊಹಿಸಿ. ಶಾಲೆ ಕಾಲೇಜು, ಕಚೇರಿ, ವ್ಯಾಪಾರ, ವಹಿವಾಟು ಮತ್ತಿತರ ಕೆಲಸಗಳಿಗೆ ವ್ಯತ್ಯಯವಾಯಿತು.

ಅಗ್ನಿಶಾಮಕ ವಾಹನ: ಫೈರ್ ಬ್ರಿಗೇಡ್ ಕಚೇರಿ ಸೇತುವೆಯ ಇನ್ನೊಂದು ಭಾಗದಲ್ಲಿದ್ದು ಅವಘಡದ ಅನಿವಾರ್ಯತೆಗೆ ಅಗ್ನಿಶಾಮಕ ವಾಹನಗಳನ್ನು ನಗರದ ಉತ್ತರ ಭಾಗದಲ್ಲೂ ನಿಲ್ಲಿಸುವ ಬಗ್ಗೆ ಅಧಿಕಾರಿಗಳು ಚಿಂತಿಸಿದಂತಿಲ್ಲ.

ಜನತೆಗೆ ಕರೆ: ರೈಲ್ವೇ ಓವರಬ್ರಿಡ್ಜ್ ನ ಕಾಮಗಾರಿ ಗರಿಷ್ಠ ಅವಧಿ ಸುಮಾರು ಎರಡು ವರ್ಷ ಆಗಬಹುದೆಂದು ಆರೋಪಿಸಿ ಸಾರ್ವಜನಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇದರ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲು ಸಾರ್ವಜನಿಕರು, ಸಂಘ-ಸಂಸ್ಥೆಗಳು, ಹಿರಿಯ ನಾಗರಿಕರು, ಅಭಿವೃದ್ಧಿ ಚಿಂತಕರು ಎಲ್ಲರೂ ಬುಧವಾರ ಸೆ. 27 ರ ಸಂಜೆ ಮರಾಠಾ ಮಂಡಳ ಕಾರ್ಯಾಲಯದಲ್ಲಿ ಆಗಮಿಸಿ ಚರ್ಚೆಯಲ್ಲಿ ಪಾಲ್ಗೊಳ್ಳಲು ನ್ಯಾ. ಅಶೋಕ ಪೋತದಾರ, ನ್ಯಾ. ನಾಗೇಶ ಸಾತೇರಿ, ಮಾಜಿ ನಗರ ಸೇವಕ ನೇತಾಜಿ ಜಾಧವ, ಮರಾಠಾ ಮಂಡಳ ಕಾರ್ಯಾಲಯ ಅಧ್ಯಕ್ಷ ಶಿವಾಜಿ ಹುಗರಕರ ಹಾಗೂ ಸಾಮಾಜಿಕ ಕಾರ್ಯಕರ್ತ ಸುಜಿತ ಮುಳಗುಂದ ಆಹ್ವಾನಿಸಿದ್ದಾರೆ.