SHARE

ಬೆಳಗಾವಿ/ಗೋಕಾಕ: ಮೂಡಲಗಿ ತಾಲೂಕಾ ಘೋಷಿಸಿ ಹಿಂಪಡೆದ ಸರಕಾರದ ನಡೆ ಪ್ರಶ್ನಿಸಿ ನಡೆದಿರುವ ಹೋರಾಟದ ವೇದಿಕೆಯ ನಾಯಕರನ್ನು ಅವಹೇಳನವಾಗಿ ಸಂಬೋಧಿಸಿದ ಸಚಿವ ರಮೇಶ ಜಾರಕಿಹೊಳಿ ಅವರ ನಡೆ ಸರಿಯಾದುದಲ್ಲ ಎಂದ ಬಿಜೆಪಿ ಮುಖಂಡ ಅಶೋಕ ಪೂಜಾರಿ ತಿಳಿ ಹೇಳಿದ್ದಾರೆ. ಮೂಡಲಗಿ ಹೋರಾಟ ಪ್ರಮುಖ ಮುಖಂಡರನ್ನು ಅಶ್ಲೀಲ ಪದಗಳಲ್ಲಿ ನಿಂದಿಸುವ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ನಡೆಯನ್ನು ಅಶೋಕ ಪೂಜಾರಿ ತರಾಟೆಗೆ ತೆಗೆದುಕೊಂಡರು.
https://kannada.thebelgaumnews.com/2017/09/25/ಮೂಡಲಗಿ-ಹೋರಾಟ-ಲಫಂಗರ-ಮಾತು-ಕ/ ಅವರ ನಡೆ-ನುಡಿ ಕಾನೂನಾತ್ಮಕವಾಗಿ, ನೈತಿಕವಾಗಿ ಮತ್ತು ಸಂಸ್ಕಾರದಿಂದ ಇರಬೇಕು. ಮೂಡಲಗಿ ತಾಲೂಕಾ ಹೋರಾಟಗಾರರ ನಿಂದಿಸುವ ಪದಗಳು ಅವರ ಸ್ಥಾನಕ್ಕೆ ತಕ್ಕವಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ವಿರೂಪಾಕ್ಷ ಯಲಿಗಾರ ಮತ್ತು ದಸ್ತಗೀರ ಉಪಸ್ಥಿತರಿದ್ದರು.