SHARE

ಬೆಳಗಾವಿ: ಸಂಶಯ ಮೂಡಿಸುವ ಪ್ರಕರಣವೊಂದರಲ್ಲಿ ವೃದ್ಧ ದಂಪತಿಗಳಿಬ್ಬರು ಕೌಟುಂಬಿಕ ಕಲಹದ ಹಿನ್ನಲೆ ಬೇಸತ್ತು ನೇಣಿಗೆ ಶರಣಾದ ಹೃದಯವಿದ್ರಾವಕ ಘಟನೆ ತಡರಾತ್ರಿ ನಡೆದು, ಬೆಳಿಗ್ಗೆ ಬೆಳಕಿಗೆ ಬಂದಿದೆ. ಬೆಳಗಾವಿ ಡೆಪ್ಯೂಟಿ ಮಾಜಿ ಮೇಯರ್ ರೇಣು ಕಿಲ್ಲೇಕರ ಅವರ ಮಾವ ಮತ್ತು ಅತ್ತೆ ನ್ಯೂ ಗೂಡ್ ಶೇಡ್ ರಸ್ತೆಯ ಬಳಿಯ ಅಪಾರ್ಟ್‌ಮೆಂಟ್ ನಲ್ಲಿ ತಡರಾತ್ರಿ ನೇಣಿಗೆ ಶರಣಾಗಿದ್ದಾರೆ. ನಾರಾಯಣ ಕಿಲ್ಲೇಕರ್ ಹಾಗೂ ಪತ್ನಿ ವಸುಂಧರಾ ಕಿಲ್ಲೇಕರ್ ಆತ್ಮಹತ್ಯೆ ಮಾಡಿಕೊಂಡ ದಂಪತಿಗಳಾಗಿದ್ದಾರೆ.

ಮೃತ ದಂಪತಿಗಳ ಆತ್ಮಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಖಡೇಬಜಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.